Select Page

ಸಿಮೋನ್ ವೇಲ್: ನಿಯತಿ ಮತ್ತು ಒಳಿತು

ಫ್ರಾನ್ಸ್‌ನಲ್ಲಿ ಹುಟ್ಟಿದ ಸಿಮೋನ್‌ ವೇಲ್‌ ಇಂಗ್ಲೆಂಡಿನಲ್ಲಿ ತನ್ನ 34ನೆಯ ವಯಸ್ಸಿನಲ್ಲೇ ಸತ್ತಳು. ಟಿ. ಎಸ್‌. ಎಲಿಯಟ್‌ ಇವಳನ್ನು a woman of genius akin to that of saints ಎನ್ನುತ್ತಾನೆ. ಜ್ಯೂಯಿಷ್‌ ಮನೆತನದಲ್ಲಿ ಇವಳು ಹುಟ್ಟಿದ್ದು. ಅವಳ ಕುಟುಂಬ ಸಂಪ್ರದಾಯಸ್ತವಲ್ಲ. ಚಿಕ್ಕಂದಿನಲ್ಲಿ ಇವಳು ನಿರೀಶ್ವರವಾದಿ. ಎರಡು ಮಹಾಯುದ್ಧಗಳ ಕಾಲದಲ್ಲಿ ಬದುಕಿದ ಇವಳು ತನ್ನ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಜನೆಯ ಸಮಯದಲ್ಲೇ ದೇಹವನ್ನು ತೀವ್ರವಾಗಿ ದಂಡಿಸುವ ದುಡಿಮೆಯಲ್ಲಿ ತೊಡಗಿದ್ದಳು. ಕಾರ್ಖಾನೆಗಳಲ್ಲಿ ಕೂಲಿಯಾಗಿ ಕಾರ್ಮಿಕ ಸಂಘಟನೆ ಮಾಡಿದಳು. ಗಣಿಗಳಲ್ಲಿ ದುಡಿದಳು. ಅವಳಿಗೆ ತನ್ನ 28ನೇ ವಯಸ್ಸಿನಲ್ಲಿ ಒಂದು ದಿವ್ಯ ಅನುಭವವಾಗಿ ತನ್ನ ಚಿಂತನೆಯಲ್ಲಿ ಕ್ರೈಸ್ತಳಾದಳು. ಆದರೆ ತನಗೆ ಪ್ರಿಯನಾದ ಬಿಷಪ್‌ ಒಬ್ಬನ ಜತೆ ಒಂದು ದೊಡ್ಡ ವಾಗ್ಯುದ್ಧದಲ್ಲಿ ತೊಡಗಿ ಮತಾಂತರವಾಗಲು ನಿರಾಕರಿಸಿದಳು. `ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ದೈವ ಸ್ಪರ್ಶ ಪಡೆದ ಸಂತರೂ ಇರಲಿಲ್ಲವೇ? ಬುದ್ಧ ಇರಲಿಲ್ಲವೇ?' ಎನ್ನುವ ಸಿಮೋನ್‌ ವೇಲ್‌ ಕ್ರಿಸ್ತನ ನಂತರ ಮಾತ್ರ ಈ ಪ್ರಪಂಚದಲ್ಲಿ ದೈವಾನುಗ್ರಹವಾಯಿತು ಎನ್ನುವುದನ್ನು ನಂಬಲಾರದವಳಾದಳು. ಸೆಕ್ಯುಲರ್‌ ಪಾಶ್ಚಿಮಾತ್ಯ ಚಿಂತನೆಯಲ್ಲಿ ಈಗಾಗಲೇ ಸಮಾಜವಾದ ಎನ್ನುವುದು ಒಂದು ಹುಸಿಯಾದ ವಿಚಾರವೆಂದು ಹಲವರಿಗೆ ಕಾಣಲು ತೊಡಗಿದೆ ಅಥವಾ ಬಹ್ಯುತ್ಪನ್ನ ಹೇಗೂ ನಿವಾರಿಸಬಹುದಾದ ಬಡವರ ಸಮಸ್ಯೆಗೆ ಸಮಾಜವಾದದ ಐಡಿಯಾಲಜಿ ಅನಗತ್ಯ ಎನಿಸತೊಡಗಿದೆ. ಆದರೆ ಮನುಷ್ಯನ ಇತಿಹಾಸದಲ್ಲಿ ಇವತ್ತಿನವರೆಗೂ ಹೊಟ್ಟೆ ತುಂಬ ಉಂಡರೂ ನೀರಸವಾದ ಅರ್ಥಹೀನವಾದ ದುಡಿಮೆಯನ್ನು ಮಾಡುವ ಒಂದು ವರ್ಗ ಇದ್ದೇ ಇರುತ್ತದೆ. ಕಮ್ಯುನಿಸ್ಟ್‌ ರಷ್ಯಾದಲ್ಲೂ ಉತ್ಪಾದನೆಯಲ್ಲಿ ತೊಡಗಿದ್ದ ಇಂಥದ್ದೊಂದು ವರ್ಗವಿತ್ತು. ಇವರು ಎಷ್ಟು ಕುಡಿದು ತಿಂದರೂ ಇವರು ವ್ಯಯ ಮಾಡುವ ದುಡಿಮೆಯ ಬಹಳಷ್ಟು ಕಾಲ ಯಾಂತ್ರಿಕವೂ ನೀರಸವೂ ಆಗಿರುತ್ತದೆ. ಹೀಗೆ ಭೌತಿಕವಾಗಿ ಸತತವಾಗಿ ಉಳಿಯುವ ಅಸಮಾನತೆಗಳ ನಡುವೆಯೂ ಮನುಷ್ಯನ ಮೂಲದಲ್ಲಿರುವ ಕಾಂತಿಯನ್ನು ಗಮನಿಸಬಲ್ಲವರು ಈ ಜಗತ್ತಿನ ಅನುಭಾವಿಗಳು. ಅವರೇ ಬಸವ, ಅಲ್ಲಮ, ತುಕಾರಾಂ, ಬ್ಲೇಕ್‌ ಇಂಥವರು. ಸಿಮೋನ್‌ ವೇಲ್‌ ಈ ಬಗೆಯ ತುಡಿತದಲ್ಲಿ ಪ್ರಪಂಚದ ಜೀವನದ ಕಷ್ಟಕ್ಕೆ ಎದುರಾದಳು. ಫ್ರಾನ್ಸ್‌ನಲ್ಲಿ ಹುಟ್ಟಿದ ಸಿಮೋನ್‌ ವೇಲ್‌ ಇಂಗ್ಲೆಂಡಿನಲ್ಲಿ ತನ್ನ 34ನೆಯ ವಯಸ್ಸಿನಲ್ಲೇ ಸತ್ತಳು. ಟಿ. ಎಸ್‌. ಎಲಿಯಟ್‌ ಇವಳನ್ನು a woman of genius akin to that of saints ಎನ್ನುತ್ತಾನೆ. ಜ್ಯೂಯಿಷ್‌ ಮನೆತನದಲ್ಲಿ ಇವಳು ಹುಟ್ಟಿದ್ದು. ಅವಳ ಕುಟುಂಬ ಸಂಪ್ರದಾಯಸ್ತವಲ್ಲ. ಚಿಕ್ಕಂದಿನಲ್ಲಿ ಇವಳು ನಿರೀಶ್ವರವಾದಿ. ಎರಡು ಮಹಾಯುದ್ಧಗಳ ಕಾಲದಲ್ಲಿ ಬದುಕಿದ ಇವಳು ತನ್ನ ಚಿಕ್ಕ ವಯಸ್ಸಿನಲ್ಲೇ ವಿದ್ಯಾರ್ಜನೆಯ ಸಮಯದಲ್ಲೇ ದೇಹವನ್ನು ತೀವ್ರವಾಗಿ ದಂಡಿಸುವ ದುಡಿಮೆಯಲ್ಲಿ ತೊಡಗಿದ್ದಳು. ಕಾರ್ಖಾನೆಗಳಲ್ಲಿ ಕೂಲಿಯಾಗಿ ಕಾರ್ಮಿಕ ಸಂಘಟನೆ ಮಾಡಿದಳು. ಗಣಿಗಳಲ್ಲಿ ದುಡಿದಳು. ಅವಳಿಗೆ ತನ್ನ 28ನೇ ವಯಸ್ಸಿನಲ್ಲಿ ಒಂದು ದಿವ್ಯ ಅನುಭವವಾಗಿ ತನ್ನ ಚಿಂತನೆಯಲ್ಲಿ ಕ್ರೈಸ್ತಳಾದಳು. ಆದರೆ ತನಗೆ ಪ್ರಿಯನಾದ ಬಿಷಪ್‌ ಒಬ್ಬನ ಜತೆ ಒಂದು ದೊಡ್ಡ ವಾಗ್ಯುದ್ಧದಲ್ಲಿ ತೊಡಗಿ ಮತಾಂತರವಾಗಲು ನಿರಾಕರಿಸಿದಳು. `ಕ್ರಿಸ್ತ ಹುಟ್ಟುವುದಕ್ಕಿಂತ ಮುಂಚೆ ದೈವ ಸ್ಪರ್ಶ ಪಡೆದ ಸಂತರೂ ಇರಲಿಲ್ಲವೇ? ಬುದ್ಧ ಇರಲಿಲ್ಲವೇ?' ಎನ್ನುವ ಸಿಮೋನ್‌ ವೇಲ್‌ ಕ್ರಿಸ್ತನ ನಂತರ ಮಾತ್ರ ಈ ಪ್ರಪಂಚದಲ್ಲಿ ದೈವಾನುಗ್ರಹವಾಯಿತು ಎನ್ನುವುದನ್ನು ನಂಬಲಾರದವಳಾದಳು. ಇವಳು ಶಾಲೆಯಲ್ಲಿ ಸಾರ್ತೃನ ಜೀವಸಂಗಾತಿಯಾದ ಸಿಮೋನ್‌ ದ ಬುವಾ ಜೊತೆ ಕಲಿತವಳು. ತನ್ನ ಮೂವತ್ತಮೂರನೆಯ ವಯಸ್ಸಿನಲ್ಲಿ ಫ್ಯಾಸಿಸ್ಟ್‌ ಜರ್ಮನಿಯನ್ನು ತೊರೆದು ಅಮೆರಿಕಕ್ಕೆ ಹೋಗುವಾಗ ಅವಳಿಗೆ ಪ್ರಿಯನಾದ ಬಿಷಪ್‌ ಫಾದರ್‌ ಫೆರಿನ್‌ ಹೀಗೆ ಬರೆಯುತ್ತಾರೆ: `ಪ್ಲೇಗ್‌ ಪೀಡಿತ ಊರಿನಲ್ಲಿ ವೈದ್ಯರ ಅಗತ್ಯವಿರುವಂತೆ ಚಿಂತನಶೀಲಕರಾದ ಧೀಮಂತ ಸಂತರು ಇಂದಿನ ಅಗತ್ಯ.' ಅಮೆರಿಕದಲ್ಲಿ ಅವಳಿಗೆ ಇರಲಾಗಲಿಲ್ಲ. ಇಂಗ್ಲೆಂಡಿಗೆ ಬಂದಳು. ಇಂಗ್ಲೆಂಡಿನಲ್ಲಿ ಇರುವಾಗ ಫ್ರಾನ್ಸ್‌ನಲ್ಲಿ ತನ್ನ ಜನರು ಸಾಕಷ್ಟು ತಿನ್ನಲು ಇಲ್ಲದೆ ಹಸಿದಿರುತ್ತಾರೆಂದು ಜೈನರ ಹಾಗೆ ಸಲ್ಲೇಖನ ವ್ರತದಲ್ಲಿ ಅತ್ಯಂತ ಕಡಿಮೆ ಆಹಾರ ಸ್ವೀಕರಿಸುತ್ತಾ ಸಾವನ್ನಪ್ಪಿದಳು. ಇದನ್ನು ಒಬ್ಬ ವೈದ್ಯ ಆತ್ಮ ಹತ್ಯೆ ಎಂದು ವರದಿ ಮಾಡುತ್ತಾನೆ. ಅವಳ ಹುಡುಕಾಟ ಮಾರ್ಕ್ಸ್‌ ವಾದದ ಪ್ರಭಾವದಿಂದ ಮೊದಲಾಗಿ ಅನುಭಾವದ ದಿಕ್ಕಿನಲ್ಲಿ ಬೆಳೆಯುತ್ತದೆ. ಅವಳ ಒಂದು ವಿಚಾರ ಹೀಗಿದೆ: `ಮಾರ್ಕ್ಸ್‌ ದುರ್ಬಲವಾದವರು ಸಂಘಟಿತರಾಗಿ ಕ್ರಾಂತಿಯನ್ನು ಮಾಡುತ್ತಾ ರೆಂದು ನಂಬುತ್ತಾನಲ್ಲವೇ?' ದುರ್ಬಲವಾದುದು ದುರ್ಬಲವಾಗಿರುವಾಗಲೇ ಒಂದು ಶಕ್ತಿಯಾಗಿಯೂ ಇರಬಹುದು ಎಂಬುದು ಹೊಸ ವಿಚಾರವಲ್ಲ. ಕ್ರಾಸ್ ಅನ್ನು ಒಂದು ಚಿಹ್ನೆಯಾಗಿ ಪಡೆದ ಕ್ರೈಸ್ತ ಧರ್ಮದ ನಂಬಿಕೆ ಅದು. ಸಿಮೋನ್‌ ವೇಲ್‌ಳಿಗೆ ಮಾತ್ರ ಈ ಚೈತನ್ಯ ಈ ಪ್ರಪಂಚದ್ದು ಮಾತ್ರವಲ್ಲ, ಅದು ಲೋಕಾತೀತವಾದುದು. ಅದು ರಹಸ್ಯವಾಗಿ ಮೌನವಾಗಿ ಕೆಲಸ ಮಾಡುತ್ತದೆ. ಜನ ಸಮುದಾಯದಲ್ಲಿ ಅದು ಪ್ರವಹಿಸುತ್ತದೆ. ಕಿಂಚಿತ್ತಾಗಿ ಸತತವಾಗಿ ಜನರ ಬಾಳಿನಲ್ಲಿ ಹೊಕ್ಕು ಹೊರಡುತ್ತಲೇ ಇರುತ್ತದೆ. ಆದರೆ ಈ ಚೈತನ್ಯ ಸಮೂಹದಲ್ಲಿ ವಾಸಿಸುವುದಿಲ್ಲ. ಬದಲಾಗಿ ವ್ಯಕ್ತಿಗಳ ಆತ್ಮದಲ್ಲಿ ಅದು ನೆಲೆಸಿರುತ್ತದೆ. ಮಾರ್ಕ್ಸ್‌ ಈ ಅಲೌಕಿಕವಾದ ರಹಸ್ಯವಾದ ಒಂದು ಶಕ್ತಿ ಚೈತನ್ಯ ರೂಪವಾಗಿ ದುರ್ಬಲವಾದುದರಲ್ಲಿ ಅಡಗಿ ಇರಬಹುದು ಎಂಬುದನ್ನು ಒಪ್ಪಿಕೊಳ್ಳದೇ ಭೌತಿಕವಾದ ಸಂಘರ್ಷದ ವ್ಯಾಪಾರದಲ್ಲಿ ಮಾತ್ರ ಹೊಮ್ಮುತ್ತದೆ ಎಂದು ತಿಳಿದಿದ್ದ. ಮನುಷ್ಯನ ಪ್ರಜ್ಞೆ ಸಾಮಾಜಿಕ ಸಂಬಂಧಗಳಿಂದ ಉತ್ಪನ್ನವಾಗುವಂಥದ್ದು; ಅದು ಸ್ವಯಂಭು ಅಲ್ಲ ಎಂದು ಮಾರ್ಕ್ಸ್‌ ಹೇಳಿದರೆ ಈ ಸಾಮಾಜಿಕ ಸಂಬಂಧಗಳನ್ನು ಆಗಿಸುವ ಮೂಲದಲ್ಲೇ ಇರುವುದು ಪ್ರಜ್ಞೆಯಲ್ಲವೇ ಎಂದು ಸಿಮೋನ್‌ ವೇಲ್‌ ವಾದಿಸುತ್ತಾಳೆ. ತನ್ನ ಚಿಕ್ಕ ವಯಸ್ಸಿನಲ್ಲೇ ಅವಳು ಟ್ರಾಟ್‌ಸ್ಕಿಯನ್ನು ಭೇಟಿಯಾಗಿದ್ದಳು. ಅವಳನ್ನು ಮೆಚ್ಚಿದ್ದ ಟ್ರಾಟ್‌ಸ್ಕಿ, ಸಿಮೋನ್‌ ವೇಲ್‌ ಕಾರ್ಮಿಕ ಹೋರಾಟದಲ್ಲಿ ನಂಬಿಕೆ ಕಳೆದುಕೊಂದು ವ್ಯಕ್ತಿ ವಾದಿಯಾದಳು ಎಂದು ದೂರುತ್ತಾನೆ. ಐಹಿಕಕ್ಕೆ ನಿಷ್ಠನಾಗಿದ್ದ ಚಾರ್ಲ್ಸ್‌ ಡಿ ಗಾಲ್‌ `ಅವಳ ತಲೆ ಸರಿ ಇಲ್ಲ' ಎನ್ನುತ್ತಾನೆ. ಆದರೆ ಟ್ರಾಟ್‌ಸ್ಕಿ ತಿಳಿದಂತೆ ಸಿಮೋನ್‌ ವೇಲ್‌ ಕೇವಲ ಕನಸುಗಾರಳಲ್ಲ. ಸತತವಾಗಿ ದುಡಿಯುತ್ತಾ ಕಾರ್ಮಿಕರ ಜತೆ ಊಟ ಮಾಡುತ್ತಾ ಅವರ ಜತೆ ಬದುಕುತ್ತಾ ತನ್ನ ಕ್ಲಿಷ್ಟವಾದ ತಾತ್ವಿಕ ಗ್ರಂಥಗಳನ್ನು ನಮಗೆ ಬಿಟ್ಟು ಹೋದವಳು. ಪ್ಲೇಟೋನ ಗುಹೆಯ ರೂಪಕ ಸಿಮೋನ್‌ ವೇಲ್‌ನ ತಾತ್ವಿಕತೆಯ ಮೂಲಾರ್ಕವಾ ಗಿತ್ತು. ಪ್ಲೇಟೋನ ಗುಹೆಯಲ್ಲಿ ನಾವೆಲ್ಲೋ ನಡುವೆ ಕೂತಿದ್ದೇವೆ. ನಮ್ಮ ಹಿಂದೆ ಬೆಳಕಿದೆ. ಬೆಳಕನ್ನು ನಾವು ನೋಡಲಾರೆವು. ನಮ್ಮ ಕೈಕಾಲು ಕಟ್ಟಿದೆ. ಹಿಂದಿನಿಂದ ಗೊಂಬೆಯಾಟ ವೊಂದು ನಡೆದಿದೆ. ಅದರ ನೆರಳುಗಳನ್ನು ಮಾತ್ರ ನಾವು ನೋಡುತ್ತೇವೆ. ನಾವು ಬಂಧಿತರು ಎಂಬುದನ್ನು ತಿಳಿಯದೆ ನೆರಳನ್ನೇ ನಿಜವೆಂದು ನಾವು ಭಾವಿಸುತ್ತೇವೆ. ಈ ರೂಪಕದಲ್ಲಿ ನಮ್ಮ ಕೈಕಾಲುಗಳನ್ನು ಕಟ್ಟಿ ಹಾಕಿದ ಕೈಕೋಳಗಳನ್ನು ಸಿಮೋನ್‌ ವೇಲ್‌ ನಾವು ಸಂಭ್ರಮಿಸುವ ಕಲ್ಪನಾ ಶಕ್ತಿ ಮತ್ತು ತಾರ್ಕಿಕ ಬುದ್ಧಿಶಕ್ತಿ ಎನ್ನುತ್ತಾಳೆ. ಈ ಕಲ್ಪನಾ ಶಕ್ತಿಯೇ ನಮ್ಮನ್ನು ಭ್ರಮೆಯಲ್ಲಿ ಬಂಧಿಸಿರುತ್ತದೆ. ಒಳನೋಟ ಸಾಧ್ಯಲಾಗಲು ನಾವು ತೆಪ್ಪಗಿರಬೇಕು. ಗುಹೆಯಲ್ಲಿರುವ ಕೆಲವು ಜಾಣರು ತಜ್ಞರಾಗಿರುತ್ತಾರೆ. ಆದರೆ ನೆರಳುಗಳನ್ನು ವಿವರಿಸುವುದರಲ್ಲೇ ಮಗ್ನರಾಗಿರುತ್ತಾರೆ. ತೋಳ ಬಂಧಿಗಳನ್ನು ಕಳಚಿ ಮೂಲದಲ್ಲಿ ಇರುವ ಬೆಳಕನ್ನು ನೋಡುವುದು ಸಾಧ್ಯ. ಆಳವಾದ ಧ್ಯಾನ, ಸತ್ಯದ ಗಮನ ಈ ಮಿಥ್ಯಾ ಲೋಕದಲ್ಲಿ ಬದುಕುವ ನಮಗೆ ಯಾವಾಗ ಹೇಗೆ ಸಾಧ್ಯ? ಎಂದು ಸಿಮೋನ್‌ ವೇಲ್‌ ಕೇಳುತ್ತಾಳೆ. ಹುಡುಕುವ ಆತುರ ನಮಗಿರಬಾರದು. ಏನನ್ನೂ ನಾವು ಉದ್ದೇಶ ಪೂರ್ವಕವಾಗಿ ನಿರೀಕ್ಷಿಸಬಾರದು. ಸುಮ್ಮನಿದ್ದು ನಮ್ಮ ಒಳಗೆ ಜ್ಞಾನ ಪ್ರವಹಿಸುವಂತೆ ನಿರಪೇಕ್ಷೆಯಲ್ಲಿ ನಾವು ಕಾದಿರಬೇಕು. ನಾವು ಬರಿದಾಗಬೇಕು. ನಗ್ನರಾಗಿರಬೇಕು. ಈ ಬಗೆಯ ಧ್ಯಾನವೆಂದರೆ ಪೂರ್ಣ ಶ್ರದ್ಧೆಯ ಪ್ರಾರ್ಥನೆಯಾಗಿರುತ್ತದೆ. ಆಸೆ ಆಮಿಷಗಳಿಂದ ಅಂಧರಾದ ಜನಸಮೂಹವನ್ನು ಪ್ಲೇಟೋ `ಗ್ರೇಟ್‌ ಬೀಸ್ಟ್‌' (ಮಹಾ ಮೃಗ) ಎಂದು ಕರೆಯುತ್ತಾನೆ. ಈ ಮಹಾ ಮೃಗ ಆಸೆಪಡುವುದನ್ನೇ ನಾವು ಒಳಿತೆಂದೂ ಇಷ್ಟ ಪಡದೇ ಇರುವುದನ್ನು ಕೆಡುಕೆಂದೂ ಭಾವಿಸುತ್ತೇವೆ. ಅಮೆರಿಕದಲ್ಲಿ ಇದನ್ನು ರಾಜಕಾರಣ ಎಂದು ಕರೆಯುತ್ತಾರೆ. ಸಿಮೋನ್‌ ವೇಲ್‌ ತನ್ನ ಮನಸ್ಸನ್ನು ಮಾತ್ರವಲ್ಲದೆ ತನ್ನ ದೇಹದ ದುಡಿಮೆಯನ್ನೂ ಪ್ರಾರ್ಥನಾ ರೂಪದ ಒಂದು ಆಯುಧವಾಗಿ ಬಳಸಿದಳು. ಅವಳಿಗೆ ಎರಡು ಶಬ್ದಗಳು ಬಹಳ ಮುಖ್ಯವಾಗಿದ್ದವು. ಒಂದು ನೆಸಸಿಟಿ-ನಿಯತಿ. ಈ ನಿಯತಿಗೆ ಎಲ್ಲವೂ ಅಧೀನ. ಭೂಮಿಗಿರುವ ಗುರುತ್ವಾಕರ್ಷಣಾ ಶಕ್ತಿ ಇದ್ದಂತೆ ಇದು. ದೇವರು ಕೂಡಾ ಇದಕ್ಕೆ ಅಧೀನ. ಸಿಮೋನ್‌ ವೇಲ್‌ ತನ್ನ 22ನೇ ವಯಸ್ಸಿನಲ್ಲಿ ತತ್ವಶಾಸ್ತ್ರದ ಅಧ್ಯಾಪಕಿಯಾದಳು. ಅಧ್ಯಾಪಕ ವೃತ್ತಿಯ ನಡುವೆ ರೆನಾಲ್ಟ್‌ ಕಾರ್‌ ಫ್ಯಾಕ್ಟರಿಯಲ್ಲೂ, ದ್ರಾಕ್ಷಿ ತೋಟಗಳಲ್ಲೂ ದೈಹಿಕ ದುಡಿಮೆ ಮಾಡಿದಳು. ಸ್ಪೇನ್‌ನ ರಿಪಬ್ಲಿಕನ್‌ ಸೈನ್ಯ ಸೇರಿ ಕ್ಯಾಟಲೋನಿಯಾದಲ್ಲಿ ಕ್ರಾಂತಿಕಾರರ ಪರ ಹೋರಾಡುವಾಗ ತನ್ನ ಒಳಜೀವನವನ್ನು ಯುದ್ಧದ ಭೀಕರತೆ ಆಕ್ರಮಿಸಿದ ಅನುಭವ ಪಡೆದಳು. 1941ರಲ್ಲಿ ದಕ್ಷಿಣ ಫ್ರಾನ್ಸ್‌ನಲ್ಲಿದ್ದು ಹೊಲಗಳಲ್ಲಿ ದುಡಿಮೆ ಮಾಡುತ್ತಾ ಗ್ರೀಕ್‌, ಸಂಸ್ಕೃತ ಮತ್ತು ಹಿಂದೂ ಧರ್ಮಗಳ ತನ್ನ ಅಭ್ಯಾಸವನ್ನು ಮುಂದುವರಿಸಿದಳು. 1942ರಲ್ಲಿ ಎರಡನೇ ಮಹಾಯುದ್ಧದ ಸಮಯದಲ್ಲಿ ಫ್ಯಾಸಿಸ್ಟ್‌ ವಿರೋಧಿ ಫ್ರೆಂಚ್‌ ತಾತ್ಕಾಲಿಕ ಸರ್ಕಾರದ ಪರವಾಗಿ ಅಮೆರಿಕಾದಲ್ಲಿ ಕೆಲಸ ಮಾಡಿದಳು. ರಾಜ್ಯಸತ್ತೆಗೂ ಪ್ರಜೆಗಳಿಗೂ ಇರಬೇಕಾದ ಅನ್ಯೋನ್ಯ ಸಂಬಂಧ ಕುರಿತ ತನ್ನ ಮಹತ್ವದ ಪುಸ್ತಕವೊಂದನ್ನು ಅವಳು ಬರೆದದ್ದು ಆಗಲೇ. ಹಿಟ್ಲ ರ್‌ ಆಕ್ರಮಣ ಮಾಡಿದ ಫ್ರಾನ್ಸ್‌ನಲ್ಲಿ ತನ್ನ ಜನರಿಗೆ ಕೊಡಲಾಗುತ್ತಿದ್ದ ಆಹಾರಕ್ಕಿಂತ ಹೆಚ್ಚೇನನ್ನೂ ತಿನ್ನಲು ನಿರಾಕರಿಸಿ ಕ್ರಮೇಣ ಪ್ರಾಯೋಪವೇಶವೆನ್ನಬಹುದಾದ ವ್ರತದಲ್ಲಿ 1943ರಲ್ಲಿ ತನ್ನ 34ನೇ ವಯಸ್ಸಿನಲ್ಲಿ ಸಿಮೋನ್‌ ವೇಲ್‌ ಸತ್ತಳು. ಈ ನಮ್ಮ ಕಾಲದ ದೊಡ್ಡ ದಾರ್ಶನಿಕರಲ್ಲಿ ಇವಳೊಬ್ಬಳೆನ್ನ ಬಹುದು. ಮಾರ್ಕ್ಸ್‌ ವಾದದಿಂದ ಪ್ರಾರಂಭವಾಗಿ ದೈವಿಕ ಶ್ರದ್ಧೆಯ ದಿಕ್ಕಲ್ಲಿ ತನ್ನ ಎಲ್ಲ ರಾಜಕೀಯ ನಿಷ್ಠೆಗಳನ್ನು ಉಳಿಸಿಕೊಂಡೇ ಇವಳು ಬೆಳೆಯುತ್ತ, ತೀವ್ರ ಆರ್ತತೆಯಲ್ಲಿ ಸತ್ಯವನ್ನು ಶೋಧಿಸುತ್ತಾ ಬದುಕಿದ ಬಗೆಯೂ ಸತ್ತ ಬಗೆಯೂ ಅಪೂರ್ವವಾದದ್ದು *** ಸಿಮೋನ್‌ ವೇಲ್‌ ನ ಮೊದಲ ಗ್ರಹಿಕೆ ಇದು: ಪ್ರಪಂಚ ಮುಚ್ಚಿದ ಬಾಗಿಲು. ಇದೊಂದು ತಡೆ, ಜೊತೆಗೇ ಇದೊಂದು ದಾರಿ. ಮಾನವ ಸ್ಥಿತಿಯಲ್ಲಿನ ಮೂಲ ವಿರೋಧವೆಂದರೆ, ಅವನು ಕಡ್ಡಾಯಗಳಿಗೆ ಒಳಗಾಗಿ ದ್ದಾನೆ, ಆದರೆ ನ್ಯಾಯಕ್ಕಾಗಿ ಹಂಬಲಿಸುತ್ತಾನೆ. ನಿಯತಿಯಲ್ಲಿ ಅವನು ನಿರ್ಬಂಧಿತ; ಆದರೆ ಒಳಿತಿಗಾಗಿ ಹಾತೊರೆಯುತ್ತಾನೆ. ಅವನ ದೇಹ ಮಾತ್ರವಲ್ಲ, ಅವನ ಯೋಚನೆಗಳೂ ಹೀಗೆ ಸಿಕ್ಕಿಬಿದ್ದಿವೆ; ಆದರೂ ಒಳಿತಿಗಾಗಿ ಸತತ ಶ್ರಮಿಸುವುದೇ ಅವನ ಅಸ್ತಿತ್ವದ ಜೀವಾಳವಾಗಿದೆ. ಆದ್ದರಿಂದಲೇ ನಾವೆಲ್ಲರೂ ನಿಯತಿಗೂ ಒಳಿತಿಗೂ ನಡುವೆ ಸಂಬಂಧವಿದೆಯೆಂದು ನಂಬುತ್ತೇವೆ. ಒಳಿತಿಗಾಗಿ ನಾವು ಮಾಡುವ ವಿಚಾರ ಇಹಲೋಕದಲ್ಲೇ ಸರ್ವಶಕ್ತವಾಗುತ್ತದೆಂದು ಕೆಲವರು ತಿಳಿಯುತ್ತಾರೆ; ಅವರು ಆದರ್ಶವಾದಿಗಳು. ಅವರು ಎರಡು ಬಗೆಯ ತಪ್ಪು ಮಾಡುತ್ತಾರೆ: ಒಂದು, ಈ ವಿಚಾರಗಳಿಗೇ ಸ್ವಯಂ ಶಕ್ತಿ ಇಲ್ಲ; ಎರಡು, ಅವು ಒಳಿತನ್ನು ಸಹಜವಾಗಿಯೇ ಗಳಿಸುವುದಿಲ್ಲ. ಯಾಕೆಂದರೆ ಈ ವಿಚಾರಗಳು ಕೂಡ ಕಡ್ಡಾಯಗಳಿಂದ ಪ್ರಭಾವಿತವಾಗುತ್ತವೆ… ಇನ್ನು ಕೆಲವರು ಕಡ್ಡಾಯಗಳೇ ಸ್ವಯಂ ಒಳಿತಿನ ದಿಕ್ಕದಲ್ಲಿ ಚಲಿಸುತ್ತವೆ ಎಂದು ತಿಳಿಯುತ್ತಾರೆ; ಇವರು ಮೂರ್ತಿಪೂಜಕರು. ಎಲ್ಲ ಭೌತವಾದಿ ಗಳನಂಬಿಕೆ ಇದು. ಇವರೂ ಎರಡು ಬಗೆಯ ತಪ್ಪು ಮಾಡುತ್ತಾರೆ: ಮೊದಲನೆಯ ದಾಗಿ, ಕಡ್ಡಾಯ ಒಳಿತಿಗೆ ಅನ್ಯವಾದದ್ದು; ಎರಡನೆಯದಾಗಿ, ಎಲ್ಲ ಕಡೆಯೂ, ಯಾವಾಗಲೂ ಕಡ್ಡಾಯಗಳು ಒಳಿತಿಗಿಂತ ಬಲವಾದವು ಎಂಬುವಂತಿಲ್ಲ. ಇಂಥ ತಪ್ಪುಗಳನ್ನು ಮಾಡದೇ ಇರುವುದು ಯಾರಿಗೆ ಸಾಧ್ಯವೆಂದರೆ ಒಳಿತು ಮತ್ತು ನಿಯತಿಗಳ ನಡುವೆ ಆಜ್ಞೇಯವಾದ ಐಕ್ಯವಿದೆ, ಆದರೆ ಈ ಐಕ್ಯ ಪ್ರಪಂಚದ ಹೊರಗಿದೆ ಎಂದು ತಿಳಿದವರಿಗೆ. ತಮ್ಮ ಆಕಾಂಕ್ಷೆಯನ್ನೂ ಗಮನವನ್ನೂ ಈ ಐಕ್ಯದಲ್ಲಿ ನೆಟ್ಟಲ್ಲಿ ಅದು ಇಲ್ಲೂ ಸಹ ನಮ್ಮ ಅನುಭವಗಮ್ಯವಾದೀತೆಂದು ಇವರು ತಿಳಿಯುತ್ತಾರೆ. ಇಪ್ಪತ್ತೈದು ಶತಮಾನಗಳ ಹಿಂದೆಯೇ, ಕೆಲವು ಗ್ರೀಕ್‌ ದಾರ್ಶನಿಕರು ಗುಲಾಮಗಿರಿ ನೈಸರ್ಗಿಕವಾಗಿಯೂ ವೈಚಾರಿಕವಾಗಿಯೂ ತಪ್ಪೆಂದು ಹೇಳಿದ್ದರು. ಕಾಲ ದೇಶಗಳಿಗೆ ಅನುಗುಣವಾಗಿ ನಮ್ಮ ನೈತಿಕತೆ ಬದಲಾಗುತ್ತದಾದರೂ ಅನುಭಾವದಿಂದ ಹುಟ್ಟುವ ನೈತಿಕತೆ ಮಾತ್ರ ಯಾವಾಗಲೂ ಸ್ಥಿರವಾಗಿದೆ, ಏಕವಾಗಿದೆ, ಒಂದೇ ರೀತಿಯದಾ ಗಿದೆ. ಉದಾಹರಣೆಗೆ ಈಜಿಪ್ಟ್‌, ಗ್ರೀಸ್‌, ಇಂಡಿಯಾ, ಚೀನಾ, ಬೌದ್ಧ ಧರ್ಮ, ಇಸ್ಲಾಂ, ಕ್ರೈಸ್ತ ಧರ್ಮ, ಎಲ್ಲ ದೇಶಗಳ ಜಾನಪದ ಪರಂಪರೆ- ಇವನ್ನು ನೋಡಬಹುದು. ಈ ನೈತಿಕತೆಯನ್ನು ಬದಲಿಸಲು ಸಾಧ್ಯವಿಲ್ಲ; ಯಾಕೆಂದರೆ, ಈ ಪ್ರಪಂಚದ ಹೊರಗಿರುವ ಪರಿಪೂರ್ಣ ಒಳಿತಿಂದ ಪ್ರತಿಫಲವಾದದ್ದು ಅದು. ಎಲ್ಲ ಧರ್ಮಗಳೂ ಈ ನೈತಿಕತೆಯನ್ನೂ ಸಾಮಾಜಿಕ ನೈತಿಕತೆಯನ್ನೂ ಬೇರೆ ಬೇರೆ ಹದಗಳಲ್ಲಿ ಮಿಶ್ರಗೊಳಿಸಿಲ್ಲವೆಂದಲ್ಲ. ಆದರೆ ಶುದ್ಧವಾದ ಅತೀತವಾದ ಒಳಿ ತೊಂದು ಇದೆ ಎಂಬುದಕ್ಕೆ ಈ ಪ್ರಪಂಚಕ್ಕೆ ಸಂಬಂಧಿಸಿದಂತೆ ಇದೇ ಪ್ರಾಯೋಗಿಕ ವಾದ ಪ್ರಮಾಣ; ದೇವರು ಇದ್ದಾನೆಂಬುದಕ್ಕೂ ಇದೇ ಪ್ರಾಯೋಗಿಕ ರುಜುವಾತು. ಕೆಲವು ವಿಶಿಷ್ಟ ಉದ್ದೇಶಗಳಿಗಾಗಿ ದೇವರು ಈ ಜಗತ್ತನ್ನೋ, ನಮ್ಮ ಜೀವನ ವನ್ನೋ ಪ್ರವೇಶಿಸಿ ಕೆಲವು ಗುರಿಗಳನ್ನು ಸಾಧಿಸುತ್ತಾನೆಂಬ ಹಾಸ್ಯಾಸ್ಪದವಾದ ದೈವದ ದೃಷ್ಟಿ ನೈಜ ಶ್ರದ್ಧೆಗೆ ವಿರೋಧವಾದದ್ದು. ವೈಜ್ಞಾನಿಕವಾದ ಲೋಕದೃಷ್ಟಿಯಿಂದ ಇದನ್ನು ಒಪ್ಪುವುದು ಅಸಾಧ್ಯ. ವಿದ್ಯೆಯ ಪ್ರಭಾವಕ್ಕೊಳಗಾದ ಕ್ರಿಶ್ಚಿಯನ್ನರು ಜಗತ್ತನ್ನು ವೈಜ್ಞಾನಿಕವಾಗಿ ಭಾವಿಸುವುದರ ಜೊತೆಗೇ, ದೈವ ತಮಗಾಗಿ ದುಡಿ ಯುತ್ತದೆಂಬ ನಂಬಿಕೆಯನ್ನೂ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರ ಮನಸ್ಸು ಇಬ್ಭಾಗವಾಗಿ ಒಡಕೊಂಡುಬಿಡುತ್ತದೆ…. ಹೀಗಾಗಿ ಅವರು ವೈಜ್ಞಾನಿಕವಾಗಿ ಯಾಗಲೀ, ಧಾರ್ಮಿಕವಾಗಿಯಾಗಲೀ ಆಲೋಚಿಸಲಾರದವರಾಗಿ ಬಿಡುತ್ತಾರೆ. ದೇವರು ನಮಗಾಗಿ ಮಧ್ಯ ಪ್ರವೇಶ ಮಾಡುವನೆಂಬುದನ್ನಂತೂ ಗಂಭೀರವಾಗಿ ಪರಿಶೀಲಿಸುವುದು ಸಹ ಸಾಧ್ಯವಿಲ್ಲ. ಹೀಗಾಗಿ ಧಾರ್ಮಿಕ ಶ್ರದ್ಧೆ ದೇವರನ್ನು ನಂಬದವರಿಗೆ ಹಾಸ್ಯಾಸ್ಪದವೆನ್ನಿಸುತ್ತದೆ. ಒಳಿತೇ ಬೇರೆ, ನಿಯತಿಯೇ ಬೇರೆ; ಒಂದು ಇನ್ನೊಂದಲ್ಲ. ಎರಡೂ ಬಹುದೂರದಲ್ಲಿರುವಂಥವು. ಎರಡರ ನಡುವಿನ ಐಕ್ಯ ಕಾಣುವುದು ನಮಗೆ ಅನಿವಾರ್ಯವಾದರೂ ಈ ಐಕ್ಯತೆ ರಹಸ್ಯವಾದದ್ದು. ಈ ಅವ್ಯಕ್ತ ಐಕ್ಯತೆಯ ಧ್ಯಾನವನ್ನೇ ಅಪ್ಪಟ ಧಾರ್ಮಿಕ ಜೀವನವೆನ್ನಬಹುದು. *** ನಿರೀಶ್ವರವಾದದ ಅತ್ಯಂತ ಮಹತ್ವದ ವಿಚಾರವೆಂದರೆ, ಪ್ರಗತಿ. ಆದರೆ ಇದು ವಸ್ತುವಿನ ಮೂಲ ಸ್ವರೂಪ ತಿಳಿದು ಮಾಡುವ ಪ್ರಾಯೋಗಿಕ ತರ್ಕಕ್ಕೆ ವಿರುದ್ಧವಾದದ್ದು. ತನ್ನಲ್ಲೇ ಸಾಮಾನ್ಯವಾದಂಥ ಗುಣ ಪಡೆದದ್ದು ಸ್ವಯಂ ಅತ್ಯುತ್ತಮ ಗುಣವಿಶೇಷ ಪಡೆದದ್ದನ್ನು ಹುಟ್ಟಿಸಬಲ್ಲುದೆಂದು ಹೇಗೆ ಹೇಳಲು ಸಾಧ್ಯ? *** ನಾನು ಒಳಿತಿಗಾಗಿ ಆಸೆಪಡುವುದು ಮಾತ್ರ ಸಾಧ್ಯ. ಉಳಿದೆಲ್ಲ ಆಸೆಗಳೂ ಕೆಲವು ಸಾರಿ ಪರಿಣಾಮಕಾರಿಯಾಗಬಹುದು ಅಥವಾ ಆಗದೇ ಇರಬಹುದಾ ದರೂ ಇದೊಂದು ಆಸೆ ಮಾತ್ರ ಯಾವತ್ತೂ ಪರಿಣಾಮಕಾರಿಯಾಗುತ್ತದೆ. ಕಾರಣವಿಷ್ಟೇ: ಚಿನ್ನದ ಮೇಲಿನ ಆಸೆ ಚಿನ್ನವೇ ಆಗಲಾರದು; ಆದರೆ ಒಳಿತಿಗಾಗಿನ ಆಸೆಯೇ ಒಳಿತಾದದ್ದು. ಧರ್ಮ ಸಂತೈಕೆಯ ಆಕರವಾಗಿರುವ ತನಕ ನೈಜ ಶ್ರದ್ಧೆಗೆ ಅಡ್ಡಿಯಾಗುತ್ತದೆ. ದೇವರು ರೊಟ್ಟಿಯಾದಾನು, ಕಲ್ಲಾದಾನು, ವೃಕ್ಷವಾದಾನು, ಕುರಿಯಾದಾನು, ಮನುಷ್ಯನಾದಾನು. ಆದರೆ ಅವನು ಜನಸಮೂಹವಾಗಲಾರ. ಇಡೀ ಜನಸಮೂಹ ದೇವರ ಅವತಾರವಾಗುವುದು ಅಸಾಧ್ಯ. *** ಪಯಿರಿನಲ್ಲಿ, ಬಳ್ಳಿಗಳಲ್ಲಿ ಎಲ್ಲ ಸೌರಶಕ್ತಿಯೂ ಶೇಖರವಾಗಿ, ಪತ್ರ ಹರಿತ್ತಿನಲ್ಲಿ ಸಾಂದ್ರಗೊಳ್ಳುತ್ತದೆ. ಈ ಮುಖಾಂತರ ಸೂರ್ಯನ ಶಕ್ತಿಯೇ ಮಾನವರನ್ನು ಪ್ರವೇಶಿಸಿ, ಅವರನ್ನು ಜೀವಂತಗೊಳಿಸುತ್ತದೆ. ರೈತ ಈ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾನೆ. ಸಾವು ಮತ್ತು ದುಡಿಮೆಗಳು ಅಗತ್ಯಗಳೇ ಹೊರತು ನಮ್ಮ ಸ್ವತಂತ್ರ ಆಯ್ಕೆಗಳಲ್ಲ. ಮನುಷ್ಯ ಶ್ರಮದ ಮೂಲಕ ಕೊಟ್ಟಿದ್ದನ್ನು ಪ್ರಪಂಚ ಅನ್ನವಾಗಿ, ಶಾಖವಾಗಿ ಮನುಷ್ಯನಿಗೆ ಹಿಂದಿರುಗಿಸುತ್ತದೆ. ಸಾವು ಎದುರಾದಾಗ ಅದನ್ನು ಒಪ್ಪಿಕೊಳ್ಳುವು ದೆಂದರೆ ಇದು ತಾನು ಎಂದು ತಿಳಿದುಕೊಳ್ಳುವ ಪ್ರತಿಯೊಂದರಿಂದಲೂ ಅಂತಿಮವಾಗಿ, ಥಟ್ಟನೇ ಕಿತ್ತುಕೊಳ್ಳುವುದಾಗಿದೆ. ಶ್ರಮವನ್ನು ಒಪ್ಪಿಕೊಳ್ಳುವುದು ಇದಕ್ಕಿಂತ ಕಡಿಮೆ ಕ್ರೂರವಾದದ್ದು. ಜೀವನದುದ್ದಕ್ಕೂ ಪ್ರತಿ ಬೆಳಿಗ್ಗೆ ಇದು ಸಂಭವಿಸುತ್ತದೆ. ಸಂಜೆಯತನಕ ಮುಂದುವರಿಯುತ್ತದೆ. ದಿನಕಳೆದು ದಿನವಾದರೂ ಬೆಳಿಗ್ಗೆಯಿಂದ ಸಂಜೆತನಕ ಸಾಗುವ ಇದು ಮಾರನೇ ದಿನ ಮತ್ತೆ ಅಗತ್ಯವಾಗುತ್ತದೆ- ಹೀಗೆ ಸಾಯುವ ತನಕ. ಪ್ರತಿ ಬೆಳಿಗ್ಗೆ ಕೂಲಿಕಾರ ಆ ದಿನದ ದುಡಿಮೆ ಮಾಡಲು ಅನುವಾಗುತ್ತಾನೆ, ತನ್ನ ಆಯುಷ್ಯ ತೀರುವತನಕ ದುಡಿಮೆಯಿಂದ ಅವನು ಬಳಲಿ ಸುಸ್ತಾಗುವುದು ಊಟ ಮಾಡಲೆಂದು, ಊಟ ಮಾಡುವುದು ದುಡಿಮೆಗಾಗಿ ಮತ್ತೆ ಶಕ್ತಿಯನ್ನು ಪಡೆಯಲೆಂದು. ಒಂದು ವರ್ಷದ ಶ್ರಮದ ನಂತರ ಎಲ್ಲವೂ ಶುರುವಿನಲ್ಲಿ ಹೇಗಿತ್ತೋ ಹಾಗೇ ಇರುತ್ತವೆ. ಅನಂತತೆಯ ಹೊಳಹುವಿನಲ್ಲಿ ಅವನ ದುಡಿಮೆ ಪ್ರಕಾಶಿತವಾದಲ್ಲಿ ಮಾತ್ರ ದುಡಿಮೆಯ ಏಕತಾನದ ಬೇಸರ ಸಹನೀಯವಾಗುತ್ತದೆ. ಯಂತ್ರ ಕಲ್ಲಿದ್ದಲನ್ನು ಉರಿಸುವಂತೆ ದುಡಿಮೆಗಾರ ತನ್ನ ಮಾಂಸವನ್ನೇ ಉರಿಸುತ್ತ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತಾನೆ. ತನ್ನ ರಕ್ತಮಾಂಸವನ್ನು ಶ್ರಮದ ಫಲಗಳಾಗಿ, ಆಹಾರ ಮದಿರೆಗಳಾಗಿ ಮಾಡಿಕೊಡುತ್ತಾನೆ. ಕಾಯಕಶ್ರಮ ಒಂದೋ ಕೀಳುಗೊಳಿಸುವ ಜೀತವಾಗುತ್ತದೆ ಅಥವಾ ಯಜ್ಞವಾಗುತ್ತದೆ. *** ಸಿಮೋನ್‌ ವೇಲ್‌ ನನಗೆ ಅಷ್ಟಿಷ್ಟು ಅರ್ಥವಾಗಿದ್ದಾಳೆ. ಆದರೆ ಅವಳನ್ನು ನಾನು ನನ್ನ ಅರಿವಿನಲ್ಲಿ ಇನ್ನೂ ಪಡೆದಿಲ್ಲ. ನನ್ನ ಹಲವು ಭಾವನಾತ್ಮಕ ವಿಚಾರಗಳಲ್ಲಿ ಅವಳು ನನಗೆ ಹೊಳೆಯುತ್ತಾಳೆ. ಶಂಕರಾಚಾರ್ಯರಂತೆ ಚಿಕ್ಕವಯಸ್ಸಿನಲ್ಲೇ ಸತ್ತ ಅವಳು ಪರಮ ತಾರ್ಕಿಕ ತತ್ವಜ್ಞಾನಿ, ಹಾಗೆಯೇ ಸಂತಳೂ ಕೂಡ. ಒಂದನ್ನು ಬಿಟ್ಟು ಇನ್ನೊಂದನ್ನು ಗ್ರಹಿಸುವಂತಿಲ್ಲವೆನ್ನುವುದೇ ಅವಳು ಒಡ್ಡುವ ತೊಡಕು. ನನ್ನದೇ ಕಷ್ಟವಿರುವುದು ದೇವರು ಈ ಲೋಕಕ್ಕೆ ಹೊರತಾಗಿ ಇದ್ದಾನೆಂಬ ಅವಳ ನಂಬಿಕೆಯಲ್ಲಿ. ಬಹಳ ವರ್ಷಗಳ ಹಿಂದೆ ಓದಿದ ಘಟನೆಯೊಂದು ನೆನಪಾಗುತ್ತದೆ. ತನಗೆ ಪೂಜ್ಯನಾದ ಟಾಲ್‌ಸ್ಟಾಯ್‌ನನ್ನು ಕಮ್ಯುನಿಸ್ಟ್‌ ಲೇಖಕ ಗಾರ್ಕಿ ನೋಡಲು ಹೋಗುತ್ತಾನೆ. ಮುದುಕ ಟಾಲ್‌ ಸ್ಟಾಯ್‌ ಬಂಡೆಯೊಂದರ ಮೇಲೆ ಕೂತಿರುತ್ತಾನೆ. ಗಾರ್ಕಿಯನ್ನು ಕೇಳುತ್ತಾನೆ: ನೀನು ದೇವರನ್ನು ನಂಬುತ್ತೀಯ? ಗಾರ್ಕಿ ಇಲ್ಲವೆನ್ನುತ್ತಾನೆ. ಟಾಲ್‌ ಸ್ಟಾಯ್‌ ಅನುಕಂಪದಲ್ಲಿ ನಕ್ಕು ಹೇಳುತ್ತಾನೆ: ನಿನ್ನಷ್ಟು ಒಳ್ಳೆಯ ಮನುಷ್ಯ ದೇವರನ್ನು ನಂಬದೇ ಇರುವುದು ಸಾಧ್ಯವೇ ಇಲ್ಲ. ನೀನು ನಂಬುತ್ತೀಯ. ಆದರೆ ಒಪ್ಪಿಕೊಳ್ಳಲು ಹೆದರುತ್ತೀಯ. ಗಾರ್ಕಿ ಬರೆಯುತ್ತಾನೆ: ದೇವರು ಇದ್ದಾನೊ ಇಲ್ಲವೊ? ಆದರೆ ಬಂಡೆಯ ಮೇಲೆ ಏಕಾಂಗಿಯಾಗಿ ಕೂತ ಟಾಲ್‌ ಸ್ಟಾಯ್‌ ನನ್ನ ಪಾಲಿಗಂತೂ ದೇವರಂತೆ ಕಂಡ. ಸಿಮೋನ್‌ ವೇಲ್‌ ಎದುರಾದಾಗ ನನಗೆ ಈ ಭೇಟಿ ನೆನಪಾಗುತ್ತದೆ. ಸಿಮೋನ್‌ ವೇಲ್‌ನ ಸಮಾಧಿ ಮಾಡಿದ ಸ್ಥಳದಲ್ಲಿ ಈ ಬರವಣಿಗೆ ಇದೆ: ನನ್ನ ಏಕಾಕಿತನದಲ್ಲಿ ಎಲ್ಲರ ದುಃಖವನ್ನೂ ತುಂಬಿಕೊಂಡಿದ್ದೇನೆ. ಯು.ಆರ್. ಅನಂತಮೂರ್ತಿ

The Boycott on Fanaa

The boycott on Fanaa in Gujarath and on everything connected with Aamir Khan frightens me. Are we becoming a fascist country? I remember the days of emergency when many of us became silent for our safety.. Shri Advani himself said,'"We were asked to bend but we crawled'" Shri Modi is stated to have said he will provide police protection if the theatre owners wish to show the film, Faana. The Congress party in Gujerath competing with Modi for popular support perhaps feels ashamed of the excess of hatred and intolerance and has expressed their disagreement with the Sangha Parivar. This again looks like face-saving and one feels saddened by this that a great mass organization with a great history of Gandhian heritage can only make a feeble noise against intolerance. Aamir Khan has just acted like an honorable citizen of the country who is concerned with the resettlement of the poor. Medha Patkar's satyagraha reminded me of the old Vaikom satyagraha of Gandhiji. That satyagraha was only in support of the law of the land that ever one has a right of the common road running in front of the temple and you cant bar some castes from walking on the road during worship of God in the temple. Similarly Medhaji was upholding the judgement of the Supreme Court that the dam should be heightened only after the poor villagers and tribes who are losing their livelihood are resettled. It is a matter of great sorrow for many of us that the Honorable court does not take its own decision seriously. I would say we would all be committing a crime against our Constitution if we let the poor go uncared for in our desire to improve our lives. I feel embarrassed to write such truisms. Aamir Khan's film is a work of art. It is not a piece of propaganda. All creative works are not just personal statements of the authors. Even if you hate the author the work deserves our attention as it exists in the public domain. Some people may feel pathologically so hateful of the author of the film that they may not like to see the film.. They have a right not to see the film. But they have no right to prevent others from viewing the film. But the people in Gujerath who are intolerant are also powerful; they have the State Power implicitly behind them. Therefore they are able to force their decision on the entire public of the sate. And the Sangh Parivar is an expert in spreading mass hysteria. No other political party in India can match the sangh parivar in this art of creating mass hysteria. People who are sane and civilized do not know how to fight the tactics employed by the fascist forces. This is a frightening situation and an indication of things to come. The Sangh Parivar is making India a second rate country in the world. I feel ashamed as an Indian that we are letting communalists grow in this country.Development without a heart has blinded all our political parties and the Sangh Parivar seems the biggest gainer of this heartless development agenda. U.R.Ananthamurthy

ನಮಗೆ ಎಂಥಾ ಮೀಸಲಾತಿ ಬೇಕು?

ನಾವು ಇಲ್ಲಿಯವರೆಗೂ ಮೀಸಲಾತಿ ಎನ್ನುವ ತತ್ವವನ್ನು ಯೋಚನೆ ಮಾಡಿದ್ದು ಅವಮಾನ ಆಧಾರಿತವಾಗಿ. ಈಗ ಹರಿಜನರನ್ನು ಯಾರೂ ಮುಟ್ಟುವುದಿಲ್ಲ. ಅವರು ಅವಮಾನಿತರಾದ ಜಾತಿ. ದಲಿತರು ಅವಮಾನಿತರು. ಆದ್ದರಿಂದ ಅವರಿಗೆ ಮೀಸಲಾತಿ ಕೊಡಬೇಕು ಎಂಬುದು ನಮ್ಮ ಈಗಿನ ಮೀಸಲಾತಿ ಪರಿಕಲ್ಪನೆ. ವರ್ತಮಾನದ ಸಂದರ್ಭದಲ್ಲಿ ಮೀಸಲಾತಿಗೆ ಅವಮಾನ ಒಂದೇ ಆಧಾರವಾದರೆ ಸಾಕಾಗದು. ಇನ್ನು ಮುಂದೆ ಯಾರು ತಮ್ಮ ತಾಂತ್ರಿಕತೆಯನ್ನು ಕಳೆದುಕೊಳ್ಳುತ್ತಾರೋ ಅವರಿಗೆ ಮೀಸಲಾತಿಯನ್ನು ಕೊಡಬೇಕು.

ಸುಮಾರು ಹದಿನೈದು ವರ್ಷಗಳಷ್ಟು ಹಿಂದೆ ನಡೆದ ಒಂದು ಘಟನೆ ನೆನಪಾಗುತ್ತಿದೆ. ನಾನು ಕೇರಳದಲ್ಲಿ ವಿಶ್ವ ವಿದ್ಯಾನಿಲಯವೊಂದರ ಕುಲಪತಿಯಾಗಿದ್ದು ಆಗತಾನೇ ಮೈಸೂರು ವಿಶ್ವ ವಿದ್ಯಾನಿಲಯದ ನನ್ನ ಕೆಲಸಕ್ಕೆ ಹಿಂದಿರುಗಿದ್ದೆ. ಡಾ.ರಾಜಾರಾಮಣ್ಣನವರು ತಮ್ಮ ಸಂಸ್ಥೆಯಲ್ಲಿ ಶಿಕ್ಷಣದ ಕುರಿತು ಒಂದು ಉಪನ್ಯಾಸ ಕೊಡಲು ಕೇಳಿದ್ದರು. ಅವತ್ತು ನಾನು ಆಡಿದ ಮಾತಿನ ಸಾರಾಂಶ ಹೀಗಿತ್ತು: `ಜ್ಞಾನದಲ್ಲಿ ಶ್ರೇಷ್ಠವಾದ ಮಟ್ಟವನ್ನು ನಾವು ಇನ್ನೂ ಮುಟ್ಟಿಲ್ಲ. ಇದಕ್ಕೆ ಕಾರಣ ಉತ್ತಮ ಜಾತಿಗಳ ಸಣ್ಣ ಸಣ್ಣ ಕೊಳಗಳಲ್ಲಿ ನಾವು ಜ್ಞಾನದ ಶ್ರೇಷ್ಠತೆಯನ್ನು ಹುಡುಕುತ್ತಿದ್ದೇವೆ. ಅಂದರೆ ಸಣ್ಣ ಕೊಳಗಳಲ್ಲಿ ದೊಡ್ಡ ಮೀನನ್ನು ಹುಡುಕಿದಂತೆ. ಆದರೆ ಭಾರತದ ಅಪಾರವಾದ ಜನಸಾಗರದಲ್ಲಿ ನಾವು ಬಲೆಯನ್ನು ಇನ್ನೂ ಬೀಸಿಲ್ಲ. ಕೆಳಜಾತಿಯ ಯುವಕ ಯುವತಿಯರು ವಿದ್ಯಾಭ್ಯಾಸವನ್ನೇ ಪಡೆಯುತ್ತಿಲ್ಲ. ಪಡೆದವರು ಕೆಲವರಿದ್ದರೂ ಅವರು ಕಳಪೆ ಶಾಲೆಗಳಿಗೆ ಹೋಗಿ ಓದಿರುತ್ತಾರೆ. ಆದರೆ ಎಲ್ಲ ಮಕ್ಕಳೂ ಒಂದೇ ಗುಣಮಟ್ಟದ ಶಾಲೆಗಳಲ್ಲಿ ಸಮಾನ ಶಿಕ್ಷಣವನ್ನು ಪಡೆದುದೇ ಆದಲ್ಲಿ ಆಗ ಸಮುದ್ರಕ್ಕೆ ಬಲೆ ಬೀಸಿದಂತೆ ನಮ್ಮ ಶ್ರೇಷ್ಠತೆಯ ಹುಡುಕಾಟ ಸಾಗುತ್ತದೆ.

ಈಗಿರುವ ಅಸಮಾನತೆಯನ್ನು ಮೀಸಲಾತಿಯ ಮುಖೇನ ಸರಿಪಡಿಸಬಹುದೆಂದು ನಾವು ನಮ್ಮನ್ನೇ ವಂಚಿಸಿಕೊಳ್ಳುತ್ತಿದ್ದೇವೆ. ಅಂಬೇಡ್ಕರ್‌ ಕೂಡಾ ಕೆಲವು ವರ್ಷಗಳಿಗಷ್ಟೇ ಮೀಸಲಾತಿ ಇರಬೇಕೆಂದು ಹೇಳಿದ್ದರು. ಆದರೆ ಕೆಲವರಿಗೆ ಮೀಸಲಾತಿಯನ್ನು ಕೊಡುವ ನೆವದಲ್ಲಿ ಜಾತಿಗಿಂತ ಹೆಚ್ಚು ಅಸಮಾನತೆಯನ್ನು ಸೃಷ್ಟಿಸುತ್ತಿರುವ ಆಧುನಿಕ ಶಿಕ್ಷಣ ಪದ್ಧತಿಯಿಂದ ನಾವು ಇನ್ನಷ್ಟು ಅಸಮಾನತೆಯನ್ನು ಸೃಷ್ಟಿಸಿ ಹೇಗೂ ಮೀಸಲಾತಿಯಿಂದ ಇದನ್ನು ಸರಿಪಡಿಸಬಹುದೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಒಮ್ಮೊಮ್ಮೆ ಅನ್ನಿಸುತ್ತದೆ. ಸಮಾನ ಶಿಕ್ಷಣ ದೊರೆಯುವುದಾದರೆ ಮೀಸಲಾತಿಯೇ ಬೇಡ. ಇದ್ದರೂ ಕೆಲವು ವರ್ಷಗಳಲ್ಲಿ ನಮ್ಮ ಅಪಾರವಾದ ಜನಸ್ತೋಮದ ವಿದ್ಯಾ ಮಂಥನದಿಂದ ದೊಡ್ಡದೊಂದು ಸೃಜನಶೀಲತೆ ದೇಶದಲ್ಲಿ ವ್ಯಕ್ತವಾದೀತು. ‘
ನಾನು ಹೀಗೆ ಹೇಳಿದ ಮಾತನ್ನು ಪತ್ರಿಕೆಯೊಂದು `ಅನಂತಮೂರ್ತಿ ಮೀಸಲಾತಿಯನ್ನೇ ವಿರೋಸುತ್ತಾರೆ’ ಎಂದು ಪ್ರಕಟಿಸಿತು. ಮೈಸೂರಿನ ಇಂಗ್ಲಿಷ್‌ ವಿಭಾಗದಲ್ಲಿದ್ದ ನನ್ನ ರೂಮಿಗೆ ಕುಪಿತರಾದ ದಲಿತ ವಿದ್ಯಾರ್ಥಿಗಳು ನುಗ್ಗಿ ನನ್ನ ಮೇಜು ಖುರ್ಚಿಗಳನ್ನು ಸುಟ್ಟು ಹಾಕಿದರೆಂದೂ ವಿಶ್ವ ವಿದ್ಯಾನಿಲಯ ಈ ಬಗ್ಗೆ ನನ್ನ ವಿವರಣೆ ಕೇಳುವುದೆಂದೂ ಪ್ರಕಟವಾಯಿತು. ನಾನು ಆಗ ನನ್ನ ಹಳ್ಳಿಯಲ್ಲಿದ್ದೆ. ಏನೂ ಹೇಳಲಾರದ, ದೂರದಲ್ಲಿದ್ದ ನನಗೆ ಆ ದಿನಗಳಲ್ಲಿ ಬೆಂಬಲಕ್ಕೆ ನಿಂತವರು ದಲಿತ ಚಳುವಳಿಯಲ್ಲಿ ಮುಖ್ಯರಾಗಿದ್ದ ಶ್ರೀ ದೇವನೂರು ಮಹಾದೇವ ಮತ್ತು ಡಾ.ಸಿದ್ಧಲಿಂಗಯ್ಯ.

ಇವತ್ತಿಗೂ ನಾನು ನನ್ನ ಆ ಹಿಂದಿನ ನಿಲುವಿಗೆ ಬದ್ಧನಾಗಿದ್ದೇನೆ. ಮಾತೃಭಾಷೆಯಲ್ಲಿ ಸಮಾನ ಶಿಕ್ಷಣ ಕೊಡುವ ತನಕ, ಅಸಮಾನತೆಯನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸುವ ಆಂಗ್ಲ ಭಾಷಾ ಮಾಧ್ಯಮದ ಶಾಲೆಗಳನ್ನು ಮುಚ್ಚುವ ತನಕ, ಮೀಸಲಾತಿಯ ತೇಪೆಗಳ ಮುಖಾಂತರ ಮಾತ್ರ ನಮ್ಮ ಸಮಾಜದ ಅಸಮಾನತೆಯನ್ನು ಅಷ್ಟಿಷ್ಟು ರಿಪೇರಿ ಮಾಡುತ್ತಾ ಒಂದು ಮೂರ್ಖ ದೇಶವಾಗಿ ಉಳಿದುಬಿಡುತ್ತೇವೆ.

ನನ್ನ ದಲಿತ ಮಿತ್ರರಲ್ಲಿ ಯಾವಾಗಲೂ ನಾನು ಹೇಳುವ ಒಂದು ಮಾತಿದೆ. ಮೊದನೆಯದು ಮೀಸಲಾತಿಯನ್ನು ಆದಷ್ಟು ಬೇಗ ಅನಗತ್ಯಗೊಳಿಸುವ ಪೂರ್ಣ ಪ್ರಮಾಣದ ಮೀಸಲಾತಿ. ಎರಡನೆಯದು ಯಾವ ಮೀಸಲಾತಿಯ ಅಗತ್ಯವೂ ಇರದಂತೆ ಮಾಡುವ ಸಮಾನ ಶಿಕ್ಷಣ ಪದ್ಧತಿ. ಈ ಎರಡರ ಮುಖಾಂತರ ನಾವು ಕೆಳಜಾತಿಯಲ್ಲೂ ದಲಿತರಲ್ಲೂ ಆತ್ಮ ವಿಶ್ವಾಸವನ್ನು ಬೆಳೆಸುವುದು ಸಾಧ್ಯವಾಗುತ್ತದೆ.

ಮೊದಲನೆಯದ್ದರ ಬಗ್ಗೆ ಒಂದಷ್ಟು ವಿವರಣೆ: ಸರಕಾರೀ ಉದ್ಯಮಗಳಲ್ಲಿ ಮಾತ್ರ ಮೀಸಲಾತಿ ಇದ್ದರೆ ಸಾಲದು. ಬಹುರಾಷ್ಟ್ರೀಯ ಸಂಸ್ಥೆಗಳೂ, ಖಾಸಗಿ ಸಂಸ್ಥೆಗಳೂ ಮೀಸಲಾತಿಯನ್ನು ಜಾರಿಗೆ ತರಬೇಕು. ಕೆನಡಿ ಕಾಲದಲ್ಲಿ ಅಮೆರಿಕದ ಖಾಸಗೀ ಸಂಸ್ಥೆಗಳೆಲ್ಲವೂ ಕರಿಯರಿಗೆ ಅವಕಾಶ ಮಾಡಿಕೊಡಬೇಕಾಗಿ ಬಂದ ಹಾಗೆ ನಾವು ಮಾಡಬೇಕು. ಇದರ ಜತೆಗೇ ಇನ್ನೊಂದು ಮುಖ್ಯವಾದ ಮಾತಿದೆ. ಇಲ್ಲಿಯವರೆಗೆ ನಾವು ಅವಮಾನ ಆಧಾರಿತವಾದ ಮೀಸಲಾತಿಯನ್ನು ಮಾತ್ರ ಬಹು ಮುಖ್ಯವೆಂದುಕೊಂಡಿದ್ದೇವೆ. ಅಸ್ಪೃಶ್ಯತೆಯ ನಿವಾರಣೆಗೆ ಮೀಸಲಾತಿ ಅಗತ್ಯ ಎಂಬುದರಲ್ಲಿ ಯಾರಿಗೂ ಭಿನ್ನಾಭಿಪ್ರಾಯವಿಲ್ಲ. ಆದರೆ ಮೀಸಲಾತಿಯನ್ನು ಪಡೆದು ಮುಂದೆ ಬಂದವರ ಮಕ್ಕಳಿಗೆ ಮೀಸಲಾತಿ ಇರಕೂಡದು. ಯಾವ ಮೀಸಲಾತಿಯನ್ನೂ ಪಡೆಯದ ಈ ಜಾತಿಗಳಲ್ಲೇ ಇನ್ನೂ ಹಿಂದುಳಿದ ಜನರಿಗೆ ಮೀಸಲಾತಿಯ ಸೌಲಭ್ಯವನ್ನು ಕಲ್ಪಿಸಬೇಕು. ಮೆರಿಟ್‌ ಬಗ್ಗೆ ನಾವು ಮಾತಾಡುವುದನ್ನು ನಿಲ್ಲಿಸಬೇಕು. ಜ್ಞಾನಕ್ಕಾಗಿಯೂ ಒಳ್ಳೆಯ ಜೀವನಕ್ಕಾಗಿಯೂ ಹಸಿದ ಜನಸಾಗರದಲ್ಲಿ ಮೆರಿಟ್‌ ಎಂಬುದು ಅರ್ಥಹೀನವಾದುದು. ನಾವು ಈ ಮೆರಿಟ್‌ ಅನ್ನು ಎಲ್ಲೆಲ್ಲಿಯೂ ಸೃಷ್ಟಿಸಲು ಸಾಧ್ಯ ಎಂಬುದನ್ನು ಈವರೆಗೆ ಮೀಸಲಾತಿಯಿಂದ ಸೃಷ್ಟಿಯಾದ ಮೆರಿಟ್‌ನಿಂದಲೇ ಮನಗಂಡಿದ್ದೇವೆ.

ಮೀಸಲಾತಿಗೆ ಅರ್ಹರಾಗಿರುವ ಸಮುದಾಯಗಳ ಒಳಗೆ ಮೀಸಲಾತಿ ಲಭ್ಯವಾದ ತಲೆಮಾರಿನಲ್ಲಿ ಇರುವ ಎಲ್ಲರೂ ಈಗ ಎಲ್ಲರ ಜತೆ ಪೈಪೋಟಿ ಮಾಡುವಷ್ಟು ಸಮರ್ಥರಾಗಿದ್ದಾರೆ. ಹೀಗೆ ಮೀಸಲಾತಿಯನ್ನು ಇನ್ನೂ ಕೆಳಗಿರುವವರಿಗೆ ಕೊಡುವುದರಿಂದ ಒಳ ಮೀಸಲಾತಿಯ ಓಟ್‌ ಬ್ಯಾಂಕ್‌ ರಾಜಕಾರಣಕ್ಕೆ ತಡೆಯೊಡ್ಡಿದಂತಾಗುತ್ತದೆ.

ಅವಮಾನ ಆಧಾರಿತ ಮೀಸಲಾತಿಯಲ್ಲದೆ ಇನ್ನೊಂದು ಬಗೆಯ ಮೀಸಲಾತಿಯ ಅಗತ್ಯ ಈ ತಂತ್ರಜ್ಞಾನದ ಯುಗದಲ್ಲಿ ಅತ್ಯಂತ ಅವಶ್ಯವಾಗಿದೆ. ತೀರಿ ಹೋದ ನನ್ನ ಗೆಳೆಯ ಡಿ.ಆರ್‌. ನಾಗರಾಜರು ಈ ಬಗ್ಗೆ ಆಳವಾದ ಚಿಂತನೆ ನಡೆಸಿದ್ದರು. ಇಂಗ್ಲಿಷ್‌ನಲ್ಲಿ ಸೂಯಿಸೈಡ್‌ ಎನ್ನುವ ಶಬ್ದ ಇರುವಂತೆ ಟೆಕ್ನಿಸೈಡ್‌ ಎನ್ನುವ ಪದವನ್ನು ನಾಗರಾಜ್‌ ಬಳಸುತ್ತಿದ್ದರು. ಈ ಟೆಕ್ನಿ ಸೈಡ್‌ ಉಂಟಾಗುವುದು ಹೊಸ ತಂತ್ರಜ್ಞಾನದಿಂದ ತಮ್ಮ ಉದ್ಯೋಗವನ್ನೂ ಕಳೆದು ಕೊಳ್ಳುವ ಅಸಂಖ್ಯಾತರ ದೃಷ್ಟಿಯಿಂದ. ಪ್ಲಾಸ್ಟಿಕ್‌ನಿಂದ ಮಡಕೆ ಮಾಡುವವರು ತಮ್ಮ ಉದ್ಯೋಗ ಕಳೆದುಕೊಂಡರು. ಬಹಳ ದೊಡ್ಡ ಬೂಟು, ಶೂಗಳ ಕಂಪೆನಿಗಳು ಬಂದ ನಂತರ ಚಪ್ಪಲಿ ಹೊಲೆಯುವವರೆಲ್ಲಾ ಕೆಲಸ ಕಳೆದುಕೊಂಡರು. ದೊಡ್ಡ ಗಿರಣಿಗಳು ಬಂದ ಕೂಡಲೇ ಬಟ್ಟೆ ನೇಯುವವರು ಅನಾಥರಾದರು. ಸ್ಟೇನ್‌ಲೆಸ್‌ ಸ್ಟೀಲ್‌ ಪಾತ್ರೆಗಳಿಂದಾಗಿ ಕಲಾಯಿ ಹಾಕುತ್ತಿದ್ದ ಹಳ್ಳಿಯ ಮುಸ್ಲಿಮರು ವೃತ್ತಿ ಹೀನರಾದರು. ಹೀಗೇ ತಂತ್ರಜ್ಞಾನದ ಬೆಳವಣಿಗೆಯ ಪ್ರತಿ ಹಂತದಲ್ಲೂ ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುವ ಅಸಂಖ್ಯಾತ ಜನರಿದ್ದಾರೆ.

ಮೇಲ್ವರ್ಗದ ಜ್ಞಾನವೆಲ್ಲಾ ಅವರ ಮೆದುಳುಗಳಲ್ಲಿದ್ದರೆ ಕೆಳವರ್ಗದ ಜ್ಞಾನವೆಲ್ಲಾ ಅವರ ಬೆರಳುಗಳಲ್ಲಿ ಇರುತ್ತದೆ. ಅವರ ಕಾಲುಗಳಲ್ಲಿ ಇರುತ್ತದೆ. ಅವರ ಮಾಸ ಖಂಡಗಳಲ್ಲಿ ಇರುತ್ತದೆ. ಅವರ ರಕ್ತದಲ್ಲಿ, ಅವರ ಉಸಿರಿನಲ್ಲಿ ಇರುತ್ತದೆ. ಅಂದರೆ ಈ ಜನ ತಮ್ಮ ಅಗಾಧವಾದ ಜ್ಞಾನವನ್ನು ತಮ್ಮ ದೇಹದಲ್ಲೇ ಅಂತರ್ಗತ ಮಾಡಿಕೊಂಡವರು. ನಮ್ಮ ದೇಶದ ಸಂಸ್ಕೃತಿಯನ್ನು ಈ ತನಕ ಉಳಿಸಿದವರೂ ಇವರೇ. ಇವರ ಬುದ್ಧಿವಂತಿಕೆ, ಆ ಜ್ಞಾನದಿಂದ ಹುಟ್ಟಿದ ತಂತ್ರಗಾರಿಕೆಯನ್ನು ಆಧುನಿಕ ತಂತ್ರಜ್ಞಾನ ನಾಶ ಮಾಡುತ್ತಿದೆ.

ನಾವು ಇಲ್ಲಿಯವರೆಗೂ ಮೀಸಲಾತಿ ಎನ್ನುವ ತತ್ವವನ್ನು ಯೋಚನೆ ಮಾಡಿದ್ದು ಅವಮಾನ ಆಧಾರಿತವಾಗಿ. ಈಗ ಹರಿಜನರನ್ನು ಯಾರೂ ಮುಟ್ಟುವುದಿಲ್ಲ. ಅವರು ಅವಮಾನಿತರಾದ ಜಾತಿ. ದಲಿತರು ಅವಮಾನಿತರು. ಆದ್ದರಿಂದ ಅವರಿಗೆ ಮೀಸಲಾತಿ ಕೊಡಬೇಕು ಎಂಬುದು ನಮ್ಮ ಈಗಿನ ಮೀಸಲಾತಿ ಪರಿಕಲ್ಪನೆ. ವರ್ತಮಾನದ ಸಂದರ್ಭದಲ್ಲಿ ಮೀಸಲಾತಿಗೆ ಅವಮಾನ ಒಂದೇ ಆಧಾರವಾದರೆ ಸಾಕಾಗದು. ಇನ್ನು ಮುಂದೆ ಯಾರು ತಮ್ಮ ತಾಂತ್ರಿಕತೆಯನ್ನು ಕಳೆದುಕೊಳ್ಳುತ್ತಾರೋ ಅವರಿಗೆ ಮೀಸಲಾತಿಯನ್ನು ಕೊಡಬೇಕು.

ಈಗ ಲೆದರ್‌ ಟೆಕ್ನಾಲಜಿಯ ಒಂದು ಇನ್ಸ್‌ಟಿಟ್ಯೂಟ್‌ ಮಾಡಿದರೆ ಅದಕ್ಕೆ ಪ್ರವೇಶ ಪಡೆಯಲು ಎಸ್‌ಎಸ್‌ಎಲ್‌ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರಬೇಕು. ಪಿಯುಸಿಯಲ್ಲಿ ರ್ಯಾಂಕ್‌ ಬಂದಿರಬೇಕು. ಇಷ್ಟಾದ ಮೇಲೆ ಸಂಸ್ಥೆಯವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕು ಎಂದರೆ ಯಾವ ಮೆಟ್ಟು ಹೊಲೆಯುವವನಿಗೂ ಅಲ್ಲಿ ಸೀಟು ಸಿಗುವುದಿಲ್ಲ.

ಯಾವತ್ತು ಮೆಟ್ಟು ಹೊಲೆಯುವ ಆಲೋಚನೆಯನ್ನೂ ಮಾಡದ, ಮೆಟ್ಟು ಹೊಲಿಯುವವರು ಅಸ್ಪೃಶ್ಯರು ಎಂದು ತಿಳಿದ ಉತ್ತಮ ಜಾತಿಯ ಮಕ್ಕಳೇ ಈ ಲೆದರ್‌ ಟೆಕ್ನಾಲಜಿಯ ಕಾಲೇಜಿಗೆ ಸೇರಲು ಅರ್ಹರಾಗಿರುತ್ತಾರೆ. ಹಾಗೆಯೇ ಟೆಕ್ಸ್‌ಟೈಲ್‌ ಟೆಕ್ನಾಲಜಿಯ ಕಾಲೇಜಿಗೆ ಪ್ರವೇಶಾರ್ಹತೆ ಗಳಿಸಿಕೊಳ್ಳುವವರಲ್ಲಿ ನೇಕಾರರ ಮಕ್ಕಳು ಇರುವುದೇ ಇಲ್ಲ. ಏಕೆಂದರೆ ಇವರೆಲ್ಲಾ ಎಸ್‌ಎಸ್‌ಎಲ್‌ಸಿ ಪಾಸಾಗುವುದಕ್ಕೆ ಸಾಧ್ಯವಿಲ್ಲದವರು! ಅಲ್ಲಿಗೂ ಸೇರಬಹುದಾದ ಮೀಸಲಾತಿಯ ಶೇಕಡಾ 18ರಷ್ಟು ಜನರು ಈಗಾಗಲೇ ಮೀಸಲಾತಿ ಪಡೆದು ಮುಂದೆ ಬಂದ ಮಧ್ಯಮವರ್ಗದವರಾಗಿರುತ್ತಾರೆ.

ಇದರ ಪರಿಣಾಮವಾಗಿ ನಾವು ದೇಶದಲ್ಲಿ ಯಾವ ತಂತ್ರಜ್ಞಾನಗಳನ್ನು ಬೆಳೆಸಬೇಕೆಂದು ಪ್ರಯತ್ನಿಸುತ್ತಿದ್ದೇವೆಯೋ ಅವುಗಳನ್ನು ಕಲಿಯುವವರೆಲ್ಲಾ ಮ್ಯಾನೇಜರ್‌ಗಳಾಗುತ್ತಿದ್ದಾರೆ. ಇವರಿಗೆ ತಾವು ಕಲಿತ ತಂತ್ರಜ್ಞಾನ ಒಂದು ನೆವ ಮಾತ್ರ. ಅದನ್ನು ಮುಂದಿಟ್ಟುಕೊಂಡು ಮ್ಯಾನೇಜ್‌ಮೆಂಟ್‌ ಕೋರ್ಸ್‌ಗಳನ್ನು ಮಾಡಿಕೊಂಡು ಮ್ಯಾನೇಜರ್‌ಗಳಾಗುವುದರಲ್ಲಿ ತಮ್ಮ ಕಲಿಕೆಯ ಸಾರ್ಥಕತೆಯನ್ನು ಕಾಣುತ್ತಿದ್ದಾರೆ. ನೀವು ಯಾವ ಐಐಟಿಗೆ ಹೋಗಿ ನೋಡಿದರೂ ಇದು ಅರ್ಥವಾಗುತ್ತದೆ. ಅಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಇಂಜಿನಿಯರಿಂಗ್‌ ಮಾಡುವವರು ಹಲವರಿರುತ್ತಾರೆ. ಅವರ ಕೋರ್ಸ್‌ ಮುಗಿದ ತಕ್ಷಣ ಒಂದು ಬಿಸಿನೆಸ್‌ ಸ್ಕೂಲಿಗೆ ಹೋಗಿ ತರಬೇತಿ ಪಡೆದು ಮ್ಯಾನೇಜರ್‌ಗಳಾಗಿಬಿಡುತ್ತಾರೆ. ಈ ಮ್ಯಾನೇಜರ್‌ಗಳ ಕೈಕೆಳಗೆ ಹೆಚ್ಚು ಕಲಿಯದೇ ಇರುವವರು, ಅಂದರೆ ನಾನು ಮೊದಲೇ ಹೇಳಿದ ಜ್ಞಾನವನ್ನು ದೇಹದಲ್ಲಿ ಅಂತರ್ಗತವಾಗಿಸಿಕೊಂಡವರು ಕೆಲಸ ಮಾಡುತ್ತಾರೆ.

ಈ ಅಸಮಾನತೆ ದೇಶದ ಅಗಾಧವಾದ ಜನಸ್ತೋಮದ ನಡುವಿನ ವಿದ್ಯಾ ಮಂಥನವನ್ನು ಬಯಸುವ ಎಲ್ಲರಿಗೂ ಇದೊಂದು ಸವಾಲಾಗಿದೆ. ಆದ್ದರಿಂದ ಆದುನಿಕ ಕಾಲದಲ್ಲಿ ನೀಡುವ ಮೀಸಲಾತಿ ಆಧುನಿಕ ಜ್ಞಾನ ಪ್ರಸಾರದಿಂದ ಯಾರ ಕೌಶಲ್ಯಗಳು ಅಪ್ರಸ್ತುತವಾಗುತ್ತಿವೆಯೋ ಅವರನ್ನೂ ಒಳಗೊಳ್ಳಬೇಕು. ಲೆದರ್‌ ಟೆಕ್ನಾಲಜಿ ಕಾಲೇಜಿನಲ್ಲಿ ಮೆಟ್ಟು ಹೊಲಿದು ಜೀವನ ಮಾಡುತ್ತಿದ್ದು ಈಗ ಆ ಅವಕಾಶವನ್ನೂ ಕಳೆದುಕೊಳ್ಳುತ್ತಿದ್ದಾರೋ ಅವರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕು. ಹಾಗೆಯೇ ಅನೇಕ ತಂತ್ರಜ್ಞಾನಗಳಲ್ಲಿ ಇಂಥವರಿಗೆ ಹೆಚ್ಚಿನ ಮೀಸಲಾತಿ ಇರಬೇಕು. ಅವರ ಜ್ಞಾನವನ್ನು ಬಳಸಿಕೊಳ್ಳುವಂಥ ಶಿಕ್ಷಣ ಕ್ರಮವನ್ನು ನಾವು ರೂಪಿಸಬೇಕು.

ನಮ್ಮ ಪರೀಕ್ಷೆಗಳು ಮೆದುಳಿನಲ್ಲಿ ನೆನಪಿಟ್ಟುಕೊಂಡದ್ದನ್ನು ಮಾತ್ರ ಪರೀಕ್ಷಿಸುವಂಥ ವ್ಯವಸ್ಥೆ. ಆದುದರಿಂದ ಬಹಳ ಜನ ಅಂಥ ಪರೀಕ್ಷೆಗಳಲ್ಲಿ ಪಾಸಾಗದೇ ಉಳಿದುಬಿಡುವ ಸಾಧ್ಯತೆ ಹೆಚ್ಚು. ಆದುದರಿಂದ ಎಸ್‌ಎಸ್‌ಎಲ್‌ಸಿಗೆ ಫೇಲ್‌ ಆಗದೇ ಇರುವಂತೆ, ಮುಂದೆ ಓದುವಂತೆ ಶಿಕ್ಷಣ ಕ್ರಮವನ್ನೂ ನಾವು ಬದಲಾಯಿಸಿಕೊಳ್ಳಬೇಕು. ಜ್ಞಾನ ಅಂದರೆ ಏನು ಎನ್ನುವ ವ್ಯಾಖ್ಯೆಯನ್ನು ನಾವು ಬದಲಾಯಿಸಿಕೊಳ್ಳಬೇಕು.

ಈ ವಿಷಯಕ್ಕೆ ಸಂಬಂಸಿದ ಹಾಗೆ ಅಮೆರಿಕ ಸಂಶೋಧಕನೊಬ್ಬನ ಅನುಭವವನ್ನು ಇಲ್ಲಿ ಉಲ್ಲೇಖಿಸುವುದು ಒಳ್ಳೆಯದೇನೋ. ಷಿಕಾಗೋ ವಿಶ್ವ ವಿದ್ಯಾನಿಯಲಯದ ಸಂಶೋಧಕನೊಬ್ಬ ಈ ಐಐಟಿಗಳಿಗೆ ಸೇರಿದ ಬಹಳ ಜನ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ದಲಿತರು ಹೀಗೆ ಯಾರು ರಿಸರ್ವೇಶನ್‌ನಿಂದ ಬಂದವರು ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುವುದೇ ಇಲ್ಲ ಎಂದು ಅಭಿಪ್ರಾಯಪಡುತ್ತಾನೆ. ಏಕೆಂದರೆ ಅವರು ಫೇಲಾಗಿಬಿಡುತ್ತಾರೆ. ಅಂದರೆ ಐಐಟಿಗಳಂಥ ಸಂಸ್ಥೆಗಳಿಗೆ ಹಿಂದುಳಿದವರು, ದಲಿತರು ಸೇರುವುದೇ ಕಡಿಮೆ, ಸೇರಿದವರೂ ಮುಂದುವರಿಸುವುದಿಲ್ಲ!

ನಮ್ಮ ದೇಶದಲ್ಲಿ ಸಾಫ್ಟ್‌ವೇರ್‌ ತಂತ್ರಜ್ಞಾನ ಬೆಳೆದಷ್ಟು ಹಾರ್ಡ್‌ವೇರ್‌ ತಂತ್ರಜ್ಞಾನ ಬೆಳೆದಿಲ್ಲ. ಯಾವ ತಂತ್ರಜ್ಞಾನ ತೆಗೆದುಕೊಂಡರೂ ನಮ್ಮಲ್ಲಿ ಸಾಫ್ಟ್‌ವೇರ್‌ ಬೆಳೆಯುತ್ತದೆಯೇ ಹೊರತು ಹಾರ್ಡ್‌ವೇರ್‌ ಬೆಳೆಯುವುದಿಲ್ಲ. ಅಮೆರಿಕದಲ್ಲಿ ಒಂದು ಕನ್ನಡಿಗರ ಸಮಾವೇಶ ನಡೆದಿತ್ತು. ಅದರಲ್ಲಿ ಭಾಗವಹಿಸಿದ್ದ ಅಮೆರಿಕನ್ನಡಿಗರೆಲ್ಲಾ ಸಾಫ್ಟ್‌ವೇರ್‌ ಉದ್ದಿಮೆಯಲ್ಲಿ ಇರುವವರು. ಆ ಸಮಾವೇಶದಲ್ಲಿ ನಾನೊಂದು ಜೋಕ್‌ ಮಾಡಿದೆ. `ನೀವು ಸಾಫ್ಟ್‌ವೇರ್‌ನಲ್ಲಿ ಇದ್ದೀರಿ. ನಿಮ್ಮ ಅಂಗಿ ತೆಗೆದರೆ ಇರುವ ಜನಿವಾರವೂ ಕೂಡ ಸಾಫ್ಟ್‌ವೇರ್‌’.
ಭಾರತೀಯರು ಸಾಫ್ಟ್‌ವೇರ್‌ನಲ್ಲಿ ಮಾತ್ರ ಮುಂದಿದ್ದಾರೆ. ಹಾರ್ಡ್‌ವೇರ್‌ನಲ್ಲಿ ಅವರ ಸಾಧನೆ ಇಲ್ಲವೇ ಇಲ್ಲ. ಇದಕ್ಕೆ ಇರುವ ಕಾರಣ ಬಹಳ ಸರಳ. ಹಾರ್ಡ್‌ವೇರ್‌ ಮಾಡುವುದಕ್ಕೆ ಸಾಧ್ಯವಿರುವುದು ಯಾರ ಜ್ಞಾನ ಅವರ ಕೈಬೆರಳುಗಳು, ಮಾಂಸಖಂಡಗಳು ಮತ್ತು ಉಸಿರಿನಲ್ಲಿದೆಯೋ ಅವರಿಗೆ ಮಾತ್ರ ಸಾಧ್ಯ. ಅಂದರೆ ಯಾರ ಜ್ಞಾನ ಅವರ ಜೀವನ ಕ್ರಮದಲ್ಲಿದೆಯೋ ಅವರಿಗೆ ಸಾಧ್ಯ.

ಯಾರ ಜ್ಞಾನ ಜೀವನ ಕ್ರಮದಲ್ಲಿದೆಯೋ ಅವರ ಜಾಣ್ಮೆಯನ್ನು ಬಳಸಿಕೊಳ್ಳುವುದಕ್ಕೆ ಆಗದೇ ಇರುವಂತೆ ಈ ನಮ್ಮ ಶಿಕ್ಷಣ ಕ್ರಮ ವನ್ನು ನಾವು ರೂಪಿಸಿದ್ದೇವೆ. ಆದುದರಿಂದ ನಾವು ಶಿಕ್ಷಣ ಕ್ಷೇತ್ರದಲ್ಲಿ ಅಗತ್ಯವಿರುವ ಬದಲಾವಣೆಗಳಿಗಾಗಿ ಪ್ರಯತ್ನಿಸಬೇಕು.

ನಮ್ಮ ನಡುವಿನ ರೈತ ಚಳವಳಿಯ ಜನ, ದಲಿತ ಚಳವಳಿಯ ಕ್ರಿಯಾಶೀಲರು ಕೇವಲ ಮಧ್ಯಮವರ್ಗದ ಪ್ರಶ್ನೆಗಳನ್ನೇ ಮುಂದೆ ಮಾಡಿಕೊಂಡಾರು ಎಂಬ ಆತಂಕದಿಂದ ನನ್ನ ಮೇಲಿನ ಮಾತುಗಳು ಹುಟ್ಟಿಕೊಂಡಿವೆ. ಏಕೆಂದರೆ ಈಗ ನಡೆಯುತ್ತಿರುವ ಅಹಿಂದದಂಥ ಚಳವಳಿಗಳು ಕೇವಲ ಸರಕಾರೀ ಕೆಲಸದಲ್ಲಿ ಮೀಸಲಾತಿಯನ್ನು ಒದಗಿಸುವುದಕ್ಕೆ ಮಾತ್ರ ಹೋರಾಟ ನಡೆಸುವಂತೆ ಕಾಣಿಸುತ್ತಿದೆ. ಇದು ಬಹಳ ದೊಡ್ಡ ತಪ್ಪು. ಸರಕಾರೀ ಕೆಲಸಗಳ ಸಂಖ್ಯೆಯಾದರೂ ಎಷ್ಟಿದೆ? ಇರುವ ಸ್ವಲ್ಪ ಕೆಲಸಕ್ಕೆ ಮುನ್ನುಗ್ಗುವವರು ಹೆಚ್ಚಾದಾಗ ಜಾತಿ ಜಾತಿಗಳ ಮಧ್ಯೆ ಜಗಳ ಆರಂಭವಾಗುತ್ತದೆ. ಕುರುಬರನ್ನು ಕಂಡರೆ ಒಕ್ಕಲಿಗರಿಗೂ, ಒಕ್ಕಲಿಗರನ್ನು ಕಂಡರೆ ಕುರುಬರಿಗೂ ಆಗದಂಥ ಸ್ಥಿತಿ ಬರುತ್ತದೆ. ಆದ್ದರಿಂದ ಮೀಸಲಾತಿಯನ್ನು ಅನಗತ್ಯ ಮಾಡುವ ಹೊಸ ಮೀಸಲಾತಿ ಮತ್ತು ಸಮಾನ ಶಿಕ್ಷಣ- ಈ ಎರಡರ ಮುಖೇನ ಒಂದು ದೊಡ್ಡ ಚಳವಳಿ ಹುಟ್ಟಿಕೊಳ್ಳುವುದು ಅಗತ್ಯವಾಗಿದೆ.

Literature in the Indian Bhashas: its front yard and its back yard

Let me use a traditional Indian home, my own home which I knew as a child, as a metaphor for Indian literature. My father and his friends frequented the front-yard which had a raised earthen platform under the country tiled roof. Caste was no bar here. It was a village, and the non-brahmin friends of my father who came to consult him for auspicious days for weddings, and other ceremonies, and, more frequently, to sort out land related litigations sat around him on colored mats on this raised platform. The very poor belonging to the same castes sat a step below under the platform, on a matless, but cowdung treated and well swept space. Father offered everyone pan and betelnuts and even tobacco to chew. This space in the frontyard, framed impressively by massive well-carved pillars was a place of authority, and cheerful and full of new tidings of the temporal world outside, as well as of the spiritual world beyond. On auspicious occasions, Puranic stories too were recited here by invited traditional story-tellers.

As a child I got to know of the affairs of the world in the men dominated frontyard of the house. My father, a self-taught man, literate in English, Sanskrit and Kannada, and therefore, an unusual and frequently sought out scholar in the hilly villages around, spoke enthusiastically of the freedom struggle led by Mahatma Gandhi to the villagers. And they gossiped about the new officers and told the same stories again and again of officers of Government whom they admired for efficiency and generosity. On auspicious days I remember some elder or the other who came as a guest to our house describing the glories of the Dussera festival in Mysore, or reading Mahabharata, sonorously, choosing an interesting episode from it.

There were only men in the frontyard, and if women came at all, they were taken inside, a cool dark hall, which was the center of the house and hence called ‘nadumane’. If the women were brahmin, they went further inside the house, which was the place for family dining. If the nadumane had colored bamboo mats spread on its cow-dung swept smooth floor, the family dining space, more private, had wooden planks to sit on. Adjoining this was the most private place of all, the kitchen, which had a niche for the household gods where an oil lamp burned day and night. Only my mother had entry into this space; even my father could go there only when he had removed his every day shirt, and had bathed. Next to the dining hall was a big bath room and a work place, to which servants could come. After that was the backyard, the most magical space for me. Had I not frequented it and eavesdropped on the gossips there, I would never have become a writer.

Into the backyard came women, women of the villages either to draw water from the well, or just to talk to my mother, or get a gift of the left-over of some special food which my mother would give them unasked. These used to be gracious moments of kindness and friendship and exchange of courtesies between women. The woman would say politely “no”, but my mother would talk her out and say, “not for you but your child”. And much more took place in the backyard, after such civilized courtesies. I should add here a significant detail: my mother was ritually more orthodox than my father, who drank coffee in hotels in the town.

The caste barriers were forgotten among women and they would exchange secrets of their sexual life, the everyday sorrows of complicated relationships between men and women, and bodily aches and pains that never got cured and never could be shared with the men folk.

The world of frontyard and the world of backyard were such different worlds. Not only was the backyard the secret world of women. Mother cooked deliciously smelling foods from herbs and leaves that grew under the uncared for bushes in the backyard. Only my mother knew them by their names; and every small thing that grew had a name which has never entered the learned dictionaries in my language. My grandfather also often ventured into the backyard and collected roots and leaves of plants as medicine for the sick in the village. It was taboo to reveal their names; they were effective only if they were kept a secret. He used to assure me as a child that he would pass on the secret knowledge to me when I grew up. But alas, I grew up to be a different kind of person because the influence of my father’s frontyard ultimately made me modern and I finished my education which began in the frontyard of my traditional home, but continued into the great frontyard of our modern civilization, England and America.

The Indian literatures in our bhashas too have a frontyard and a backyard. Let me digress a little on why I use the word ‘Bhasha’. It is usual to call the Indian languages vernaculars. I find it insulting to use the word ‘vernacular’. The word has all the features of another insulting word, ‘ethnic’. Such words are used by imperialists in a condescending manner. Nor am I happy with the word, ‘regional language’. Aren’t all languages of the world regional, in the first instance, and they grow to be ‘international’ because of imperialist political expansion? Even the word ‘dialect’, is of doubtful usability, for if a dialect has an army and a ‘national poet’, it becomes a language.

Which is the frontyard of our bhashas? Let me take the example of my own language, Kannada. The first great poet in my language, Pampa, had for his model, literature in Sanskrit. As he was a great poet, he did not imitate the model but improvised on it a great deal. I would say that Sanskrit literature of pan Indian fame and importance was Pampa’s frontyard but he was aware of a secret backyard, fragrant and fertile and unused. These were the innumerable indigenous oral folk traditions in the language. This is what we may call the ‘Desi’. The classics in Sanskrit constitute the ‘Marga’, the royal highway.

I am using Pampa’s own words, Desi and Marga. His genius lay in the sensitive and telling combinations he made of Marga and Desi- not just for aesthetic structuring; it had implications for the treatment of his themes as well. The universal truths celebrated in Sanskrit literature were not only given a “local habitation and a name”, but they became pulsatingly alive in Kannada, cohabiting with the folk imagination. The two worlds of the front and the back have ever since been meeting creatively in our literary works. The back-yard is inexhaustible. As literacy spreads and more and more people emerge into the frontyard of our civilization they bring their own richness, as memories, and desire to integrate with the mainstream of world literature.

The backyard which still is the world of women, shudras, the secret therapeutic herbs, and roots and tendrils for new tastes keeps literature in the bhashas continuously supplied with new themes and treatments. Sanskrit, as a language has no backyard of its own; it has had to yield place to the bhashas in the backyards for the continuity of its spiritual substance. English in England has always had its backyard: in Ireland, or in Africa, or West Indies, or India– and at one time it was America. Now in our bhashas we have a frontyard of our own classical literature, the literature in Sanskrit, which the late Ramanujan was fond of calling father-tongue. What dominate the goings on in the frontyard of our lives are not just these two only. There is the presence of the powerful language, English- the language of our modernity. But none of these have any power by themselves; as a matter of fact, they are impotent if they fail to cohabit with the world of the backyard.

……….

Literature in the bhashas have also constituted themselves as literary traditions and when they do so they are in search of their own specific royal high way. The royal high way is meant for meta-narratives, which can vie with the classical Sanskrit tradition. One can imagine what happens to its own backyard then. The linguistic sub-cultures are sought to be undermined then in a hegemonic relation to the accepted and honored royal path. Yet they can only be undermined but not destroyed. When the royal path becomes pompous and loud and artificially rhetorical and, therefore, a voice of public emotion only it loses the flexibility and truthfulness and earthiness of the common speech. It is at such moments of cultural crisis that the traditions in the backyard make a come-back and revitalize the language. This is what Wordsworth, Blake and Hopkins have done to the English language in their own country, and in our country the saint poets like Tukaram, Basava, Nanak and Kabir have done it with much greater consequence for our culture. The Shudras and women were empowered by the great saint poets of India. No one can talk about literature in the Indian bhashas without recognizing its intimate relationship with larger political and cultural questions.

I hesitate to write any further on this for I will have to launch on the disastrous consequences to our cultural heritage of a lively dialectical tension between Marga and Desi, if the senselessly greedy globalization were to succeed. Without a living civilizations of pluralities of languages, cultures,civilizations and religions, and even of food and dress habits we will cease to be authentically local, and meaningfully universal. Do our languages, which transacted with a vibrant creativity our rootedness in a tradition with the widening branches of the outside world, have a chance to continue to mould our children’s lives vitally and usefully, as in the past? Could any country truly globalize without wiping out the inconvenient pluralities?
……

This is a question we ask ourselves with a profound sense of anxiety. The elitist Brahmins and neo-brahmins are being tempted by the Corporate World of Globalisation, and people, who are supposed to be born into the Kula of Shri Krishna have begun to rule us as rude barbarians. And the so-called ‘Sons of the soil’ are only too eager to sign MOUs which threaten to deplete our fertile backyard.

And there is no place either for a leisurely frontyard, or for a dark and fertile backyard in the concrete jungles which we inhabit today.

U.R.ANANTHA MURTHY

‘ಪೂರ್ವಭಾಷಿ’ ಸಾಲ್ ಬೆಲ್ಲೋನ ಸಾಂಗತ್ಯ

ಚಿಕಾಗೊ ನಗರದ ರಾಮಾನುಜನ್‌ ಮನೆಯಲ್ಲಿ ಕಾದಂಬರಿಕಾರ ಸಾಲ್‌ ಬೆಲ್ಲೊನನ್ನು ಭೇಟಿಯಾಗಿದ್ದೆ. ಎಪ್ಪತ್ತರ ದಶಕದ ಮಧ್ಯದಲ್ಲಿ ಎಂದು ನೆನಪು. ಮಗನನ್ನು ಈಜಲು ಕೊಳದಲ್ಲಿ ಬಿಟ್ಟು ಬೆಲ್ಲೋ ಬಂದಿದ್ದ. ಸಾಲ್‌ ಬೆಲ್ಲೊನನ್ನು ಟೀಸ್‌ ಮಾಡಲೆಂದು ರಾಮಾನುಜನ್ನರ ಹೆಂಡತಿ ಮಾಲಿ `ನಿನ್ನ ಯಾವ ಹೆಂಡತಿಯ ಮಗನ ಸರದಿ ಇವತ್ತು? ಎಂದಳು. ಹಲವು ಬಾರಿ ಮದುವೆಯಾದ ಖ್ಯಾತಿ ಬೆಲ್ಲೋನದು. ಬೆಲ್ಲೊ ನಕ್ಕು ಜಂಬದಿಂದ ಹುಬ್ಬನ್ನು ಏರಿಸಿ, `ಯಾವ ಹೆಂಡತಿ ಎಂದು ಹೇಗೆ ವಿವರಿಸಲಿ? ಸೀಸರನ ಹೆಂಡತಿ ಎಂದರೆ ಸಾಕಲ್ಲವೆ? ಎಂದ.

ಪ್ರಿಯರ ಎದುರು ಕೊಚ್ಚಿಕೊಳ್ಳುವ ಖುಷಿಯವನಾದ ನನಗೆ ಬೆಲ್ಲೋನ ಹಾಸ್ಯದ ಗರ್ವ ಇಷ್ಟವಾಯಿತು. ಬೇಸಿಗೆಯಾದ್ದರಿಂದ ತುಂಡುತೋಳಿನ ಅಂಗಿ ತೊಟ್ಟದ್ದ ಬೆಲ್ಲೋಗೆ ಟೀ ಕೊಡುತ್ತ ಮಾಲಿ, ಅವಳ ಸುಂದರವಾದ ಅಗಲವಾದ ಕಣ್ಣುಗಳನ್ನು ಮಿಟುಕಿಸಿ, `ಅಂಗಿ ಚೆನ್ನಾಗಿದೆ. ನೀನೇ ಕೊಂಡದ್ದೊ ಅಥವಾ ನಿನ್ನ ಮಿಲಿಯನರ್‌ ತಮ್ಮ ತೊಟ್ಟು ವರ್ಗಾಯಿಸಿದ್ದೊ?’ ಎಂದಳು. ನಮ್ಮ ಲಂಗ ತೊಟ್ಟ ಬಾಲೆಯರ ಕೀಟಲೆ ಮಾಲಿಯ ಹಾವಭಾವದಲ್ಲಿತ್ತು.

ಎದುರಿನ ಕುರ್ಚಿಯಲ್ಲಿ ಕೂತಿದ್ದ ಬೆಲ್ಲೋನನ್ನೂ ಅವನಿಗೆ ಅಪರಿಚಿತನಾದ ನನ್ನನ್ನೂ ಈ ಹಾಸ್ಯದಲ್ಲಿ ಹತ್ತಿರ ತರುವ ಉಪಾಯ ಮಾಲಿಯದಾಗಿತ್ತು. ಆವತ್ತು ಸಂಜೆ ನನ್ನನ್ನು ಭೇಟಿಯಾಗಲು ಒಂದು ಔತಣಕೂಟವನ್ನು ರಾಮಾನುಜನ್ ಮತ್ತು ಮಾಲಿ ಏರ್ಪಡಿಸಿದ್ದರು. ಈ ಕೂಟಕ್ಕೆ ತನಗೆ ಬರಲಾಗುವುದಿಲ್ಲವೆಂದು ಒಬ್ಬನೇ ನನ್ನನ್ನು ನೋಡಲು ಬೆಲ್ಲೋ ಬಂದಿದ್ದ. ಈ ವಿಶೇಷ ಭೇಟಿ ನನಗೆ ಹಗುರಾಗಲೆಂದು ಇಬ್ಬರೂ ಸಂಚು ಮಾಡಿದಂತೆ ಕಂಡು ನಾನು ಪುಳಕಿತನಾಗಿದ್ದೆ. ನೊಬೆಲ್‌ ಪಾರಿತೋಷಕ ಪಡೆದಾತ ಕೆಲವು ನಿಮಿಷಗಳ ಕಾಲ ನನ್ನ ಜೊತೆಗಾರನಾಗುವಂತೆ ಮಾಲಿ ಮಾಡಿದ್ದಳು.

ತುಂಟತನದಲ್ಲಿ ಮಿಂಚುವ ಮಾಲಿ, ಮೂಲೆಯ ಕುರ್ಚಿಯಲ್ಲಿ ಅಚ್ಚುಕಟ್ಟಾಗಿ ಕೂತ ರಾಮಾನುಜನ್‌ ಮತ್ತು ಅವನ ಜೊತೆ ಮಾತಿಗೆ ಕಾದ ನಾನು ಬೆಲ್ಲೋ ಕಣ್ಣುಗಳಲ್ಲಿ ಇದ್ದೆವು. ರಾಮನ ಗುಣಗಳನ್ನು ಕೊಂಡಾಡುತ್ತ ವಾಲ್ಮೀಕಿ ಅವನನ್ನು `ಪೂರ್ವ ಭಾಷಿ’ ಎನ್ನುತ್ತಾನೆ. ಅಂದರೆ ಎದುರು ಸಿಕ್ಕವನ ಜೊತೆ ಅವನ ಮಾತಿಗೆ ಕಾಯದೆ ತಾನೇ ಮಾತಿಗೆ ಪ್ರಾರಂಭಿಸುವ ಸೌಜನ್ಯ ರಾಮನದು ಎನ್ನುತ್ತಾನೆ ವಾಲ್ಮೀಕಿ. ತನ್ನ ಕಣ್ಣುಗಳಲ್ಲಿ ಇದ್ದ ಮೂವರಲ್ಲಿ ನನ್ನನ್ನು ಆಯ್ದು ಉಳಿದಿಬ್ಬರಿಗೆ ಗೊತ್ತಿದ್ದನ್ನು ನನಗಾಗಿ ಬೆಲ್ಲೋ ಮತ್ತೆ ಹೇಳಿದ: `ಹಲವು ವರ್ಷಗಳ ಕಾಲ ನಾನು ನನ್ನ ಅಂಗಿ ಕೊಂಡಿದ್ದೇ ಇಲ್ಲ. ನನ್ನ ಮಿಲಿಯನರ್‌ ಅಣ್ಣ ಕೊಂಡು ತೊಟ್ಟು ನನಗದನ್ನು ಕೊಡುವುದು. ಈಗ ನಾನೇ ಕೊಳ್ಳಲು ಶುರು ಮಾಡಿದ್ದೇನೆ. ನನಗೆ ಬೇಕಾದ ಬಣ್ಣ, ನೇಯ್ಗೆಯನ್ನು ಆಯುವುದರ ಉಲ್ಲಾಸ ಈಗ ನನ್ನ ಅನುಭವಕ್ಕೆ ಬಂದಿದೆ ಈ ಇಳಿ ವಯಸ್ಸಿನಲ್ಲಿ’ ಎಂದು ನಕ್ಕು ಗಂಭೀರನಾಗಿ ಮುಂದುವರೆದ.

ಚಿಕಾಗೋ ವಿಶ್ವವಿದ್ಯಾಲಯ ಇರುವ ಪ್ರದೇಶದ ಅಂಚಿನಲ್ಲಿ ಕಡುಬಡವರು ಬದುಕುವ ಕೊಳಚೆ ಪ್ರದೇಶ ಇನ್ನೂ ಇದೆ. ಬೆಲ್ಲೋ ಹುಟ್ಟಿ ಬೆಳೆದದ್ದು ಈ ಕೊಳಚೆ ಪ್ರದೇಶದಲ್ಲಿ, ಹೆಚ್ಚಾಗಿ ಕಪ್ಪು ಜನರ ನಡುವೆ. ಕೆಲವು ಕಿಲೋಮೀಟರುಗಳ ಆಚೆ ಇರುವ ಈ ಪ್ರದೇಶದ ದಿಕ್ಕನ್ನು ಬೊಟ್ಟು ಮಾಡಿ ತೋರಿಸಿ `ನನ್ನ ತಂದೆಯವರ ಇಡೀ ಜೀವನದ ಹೋರಾಟ ಈ ಕೆಲವು ಕಿಲೋಮೀಟರ್‌ಗಳನ್ನು ನಾನು ದಾಟುವಂತೆ ಮಾಡಿದ್ದು. ಆಚೆಯಿಂದ ಈಚೆ ಬಂದದ್ದೇ ಬದುಕಿನ ಅರ್ಥಗಳೇ ಬದಲಾದವು. ಸೋದರ ಮಿಲಿಯನರ್‌ ಆದ. ನಾನು ಲೇಖಕನಾಗಿ ಇಲ್ಲಿ ಪ್ರಾಧ್ಯಾಪಕನಾದೆ. ಎರಡಕ್ಕೂ ಒಂದೆರಡು ಕಿಲೋಮೀಟರ್‌ ಅಂತರ- ಅಷ್ಟೆ’. ತನ್ನ ಸಾಧನೆ ಅಲ್ಪವೆಂದೂ ಅಪಾರವೆಂದೂ ಏಕಕಾಲದಲ್ಲಿ ಹಾಸ್ಯದಲ್ಲಿ ಹೇಳಿದವನು ನನ್ನನ್ನು ಸ್ನೇಹದಲ್ಲಿ ಕೇಳಿದ: `ಭಾರತದಲ್ಲಿ ವಿಶೇಷವಾಗಿ ಏನು ನಡೆಯುತ್ತಿದೆ?.’

ಮಾಲಿ ಹಿಂದಿನ ದಿನದ ನಮ್ಮ ಮಾತಿನ ನೆನಪಿನಲ್ಲಿ ಉತ್ಸಾಹಿತಳಾಗಿ,`ಅದೊಂದು ಮಲೆಯಾಳಿ ಕಥೆಯನ್ನು ನನಗೆ ಹೇಳಿದೆಯಲ್ಲಾ ವೈಕಂ ಮೊಹಮ್ಮದ್‌ ಬಷೀರರದು, ಅದನ್ನು ಬೆಲ್ಲೋಗೆ ಹೇಳು’ ಎಂದಳು. ಕಥೆ ಹೇಳಲು ತೊಡಗಿದರೆ ನಾನು ಉಲ್ಲಸಿತನಾಗಿ ಮಾತನಾಡುವನೆಂದು ಮಾಲಿಗೆ ಗೊತ್ತಿತ್ತು. ನಾನು `ಪಾತುಮ್ಮನ ಆಡು’ ಕಥೆಯನ್ನು ಬೆಲ್ಲೋಗೆ ಹೇಳಿದೆ.

ತಂಗಿ ಸಾಕಿದ ಹಪಹಪಿಸುವ ಹಸಿವಿನ ಆಡು, ತಂಗಿಯ ಜೊತೆ ಎಲ್ಲೆಲ್ಲೂ ಓಡಾಡುತ್ತ, ಸಿಕ್ಕಿದ್ದನ್ನು ತಿನ್ನಲೆಂದೇ ಹುಡುಕಾಡುತ್ತ ಮನೆಯಲ್ಲಿ ಎಲ್ಲವನ್ನೂ ತಿನ್ನುತ್ತಾ ಕೊನೆಗೆ ಬರೆಹಗಾರನಾದ ವೈಕಂ ಬಷೀರನ ಹಸ್ತಪ್ರತಿಯನ್ನೂ ತಿಂದಿದ್ದನ್ನು ನಾನು ವಿವರಿಸಿದೆ. ಈ ಕಥೆಯಲ್ಲಿ ಕುಟುಂಬದ ಎಲ್ಲರೂ ಒಬ್ಬರನ್ನೊಬ್ಬರು ಶೋಷಿಸುತ್ತಾರೆ. ತಾಯಿ ಮಗಳಿಗೆ ಗೊತ್ತಿಲ್ಲದಂತೆ ಆಡಿನ ಹಾಲು ಕರೆದುಕೊಳ್ಳುತ್ತಾಳೆ. ಮಗಳು ತಾಯಿಯ ಸಾಂಬಾರ ಪದಾರ್ಥ ಕದಿಯುತ್ತಾಳೆ. ಮನೆಯಲ್ಲಿ ಕಾಲು ಕುಂಟಾದ ಸಹೋದರನೊಬ್ಬ `ನಾನು ನತದೃಷ್ಟ ಕುಂಟ. ನೀನೊಬ್ಬ ಹಣ ಗಳಿಸಿ ಮನೆಗೆ ಬಂದಿದ್ದೀಯ’ ಎಂದು ಅಣ್ಣನನ್ನು ಬ್ಲಾಕ್‌ ಮೇಲ್‌ ಮಾಡುತ್ತಾನೆ. ಕಾಲಿನ ಕುಂಟೇ ಅವನ ಅಸ್ತ್ರ. ನಾನು ಬೆಲ್ಲೋಗೆ ಹೇಳಿದೆ: `ಕಾಫ್ಕಾ ಈ ಕಥೆಯನ್ನು ಬರೆದಿದ್ದರೆ ಇದೊಂದು ಭೀಕರ ದುಃಸ್ವಪ್ನದ ಕಥೆಯಾಗಿ ಇರುತ್ತಿತ್ತು. ಆದರೆ ವೈಕಂ ಮೊಹಮ್ಮದ್‌ ಬಷೀರರ ಮಲೆಯಾಳೀ ಮುಸ್ಲಿಂ ಹಾಸ್ಯದಲ್ಲಿ ಈ ಕಥೆ ಉದಾರವಾದ ಅಂತಃಕರಣದ ಹಾಸ್ಯ ಕತೆಯಾಗಿದೆ.’ ನಾನು ಹೇಳಿದ್ದು ಬೆಲ್ಲೋಗೆ ಇಷ್ಟವಾಗಿರಬೇಕು. `ಭಾರತಕ್ಕೆ ಇನ್ನೂ ಕತೆ ಹೇಳು ವುದು, ಹೇಳಿದ ಕತೆ ತಾತ್ವಿಕವಾಗಿಯೂ ಗಹನವಾಗುವುದು ಸಾಧ್ಯವಿದೆಯಲ್ಲಾ’ ಎಂದು ಮೆಚ್ಚಿಕೆಯಲ್ಲಿ ನುಡಿದ.

***

ಬೆಲ್ಲೋ ಜೊತೆ ಆಡಿದ ಇನ್ನಷ್ಟು ವಿಚಾರಗಳು ನೆನಪಾಗುತ್ತವೆ. ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ರಷ್ಯಾದ ಲೇಖಕರು ಎಲ್ಲಾ ತಾತ್ವಿಕ ವಿಚಾರಗಳಿಗೆ ಬಹಳ ಹುಮ್ಮಸ್ಸಿನಿಂದ ಸ್ಪಂದಿಸುತ್ತಿದ್ದರು. ಕ್ರಾಂತಿ ಪೂರ್ವ ರಷ್ಯಾ ಹೊಸತಿಗಾಗಿ ಕುದಿಯುತ್ತಿತ್ತು. ಮರಣ ದಂಡನೆಗೆ ಒಳಗಾಗಿ ಸೈಬೀರಿಯಾದಲ್ಲಿ ದುಡಿಮೆ ಮಾಡುತ್ತಿದ್ದ ದಾಸ್ತೋವಸ್ಕಿ ತನ್ನ ಸೋದರನಿಗೆ ಮಿಲ್‌ ಮತ್ತು ಬೆಂಥಮರ ಹೊಸತೊಂದು ಪುಸ್ತಕವನ್ನು ಕಳುಹಿಸು ಎಂದು ಹಾತೊರೆದು ಬರೆಯುತ್ತಾನೆ.

ಮನುಷ್ಯನ ಒಳ್ಳೆತನವೆಲ್ಲವೂ ಅವನ ಸ್ವಾರ್ಥದಿಂದಲೇ ಹೊಮ್ಮುತ್ತದೆ, ಯಾವ ದೈವ ಕೃಪೆಯೂ ಅದಕ್ಕೆ ಆಧಾರವಲ್ಲ ಎಂದು ತಿಳಿದಿದ್ದ ಇಂಗ್ಲೆಂಡಿನ ಪ್ರಯೋಜನವಾದಿಗಳು ದಾಸ್ತೋವಸ್ಕಿಯ ಆತ್ಮದ ಎದುರಾಳಿಗಳು. ಅಂಥವರಿಗೆ ಎದುರಾಗುವುದು ದಾಸ್ತೋವಸ್ಕಿಯ ಸೃಜನ ಶೀಲತೆಯ ಮೂಲದ ರಹಸ್ಯವಾಗಿದೆ. ಬೆಲ್ಲೋ ಜೊತೆ ಇದನ್ನು ಚರ್ಚಿಸುತ್ತಿದ್ದ ನಾನು ತುರ್ತು ಪರಿಸ್ಥಿತಿಗೆ ಪೂರ್ವದಲ್ಲಿ ಜನಾಂದೋಲನದಲ್ಲಿ ತೊಡಗಿದ್ದ ಜಯಪ್ರಕಾಶರು ಹೇಳಿದ ಒಂದು ಮಾತನ್ನು ನೆನಪು ಮಾಡಿಕೊಂಡು ಹೇಳಿದೆ. ಅಮೆರಿಕದಲ್ಲಿ ಓದುತ್ತಿದ್ದಾಗ ಕಮ್ಯುನಿಸ್ಟನಾಗಿದ್ದ ಜಯಪ್ರಕಾಶ್‌, ವಿನೋಬಾರ ನಾಯಕತ್ವದಲ್ಲಿ ಜೀವನ ದಾನ ಮಾಡಿದ ನಂತರ ಹೇಳಿದ್ದ ಮಾತಿದು- `ಮಾರ್ಕ್ಸ್‌ ವಾದ ಈ ಜಗತ್ತಿನ ಭೌತಿಕವಾದ ಎಲ್ಲ ಸತ್ಯಗಳನ್ನೂ ವಿವರಿಸುತ್ತದೆ. ಆದರೆ ಮನುಷ್ಯ ಯಾಕೆ ಒಳ್ಳೆಯವನಾಗಿರಬೇಕೆಂಬುದನ್ನು ಮಾರ್ಕ್ಸ್‌ ವಾದ ವಿವರಿಸಲಾರದು.’

ಇದನ್ನು ಕೇಳಿಸಿಕೊಂಡ ಬೆಲ್ಲೋ ನಸುನಕ್ಕು ಹೇಳಿದ: `ಹತ್ತೊಂಬತ್ತನೇ ಶತಮಾನದ ರಷ್ಯನ್ನರಂತೆ ನೀವು ಭಾರತೀಯರೂ ತತ್ವಕ್ಕೆ ಹುರುಪಿನಲ್ಲಿ ಸ್ಪಂದಿಸುವುದು ನನಗೆ ವಿಶೇಷವೆನ್ನಿಸುತ್ತದೆ. ನಾವೀಗ ಯೂರೋಪಿನಲ್ಲಿ ವಿಚಾರಗಳಿಗೆ ಹೀಗೆ ಭಾವಾವೇಶದಲ್ಲಿ ಸ್ಪಂದಿಸುವುದಿಲ್ಲ. ಹಾಗೆ ಸ್ಪಂದಿಸಿದರೆ ನಾವು ಪೆದ್ದು ಭಾವುಕರಂತೆ ಕಾಣುತ್ತೇವೆ. ಇದು ಸರಿಯಲ್ಲ.’
`ಭಾರತಕ್ಕೆ ಬರುವುದಿಲ್ಲವೆ?’ ಎಂದು ನಾನು ಬೆಲ್ಲೋನನ್ನು ಕೇಳಿದೆ. ಸತ್ಯಜಿತ್‌ ರಾಯ್‌ರ `ಪಥೇರ್‌ ಪಂಚಾಲಿ’ಯಲ್ಲಿ ಬರುವ ಸಾವನ್ನು ಉತ್ಕಟವಾಗಿ ಅನುಭವಿಸಿ ಬೆಲ್ಲೋ ಬರೆದದ್ದು ನನ್ನ ನೆನಪಿನಲ್ಲಿತ್ತು. `ಇಲ್ಲ. ನನಗೆ ವಯಸ್ಸಾಯಿತು. ಭಾರತದ ಬಡತನದ ಬವಣೆಯನ್ನು ನಾನು ಎದುರಿಸಲಾರೆ’ ಎಂದ. ಹೊರಡುವಾಗ ಕೊಂಚ ಮುಜುಗರದಲ್ಲಿ ರಾಮಾನುಜನ್‌ಗೆ ಹೇಳಿದ: `ನೀವು ಭಾಷಾಂತರಿಸಿದ ಇವರ ಕಾದಂಬರಿಯನ್ನು ಅಮೆರಿಕಾದಲ್ಲಿ ಪ್ರಕಟಿಸುವುದು ಅವಶ್ಯವೆನ್ನಿಸಿದರೆ ನನ್ನ ಸಹಾಯ ಕೇಳಲು ಹಿಂಜರಿಯಬೇಡಿ. ಒಂದು ಒಳ್ಳೆಯ ಕೃತಿಗೆ ಈ ಬೆಲ್ಲೋನ ಸರ್ಟಿಫಿಕೇಟ್‌ ಬೇಕೆಂದು ನಾನು ಹೇಳುತ್ತಿರುವುದಲ್ಲ.’

ನಾನು ಬಹಳ ಇಷ್ಟ ಪಡಪತ್ತಿದ್ದ ಸಾಲ್‌ ಬೆಲ್ಲೋ ಅಮೆರಿಕದ ದೊಡ್ಡ ಲಿಬರಲ್‌ ಲೇಖಕನಾಗಿದ್ದ- ಲಯನಲ್‌ ಟ್ರಿಲ್ಲಿಂಗ್‌ನಂತೆ. ಈ ಬಗೆಯ ಲಿಬರಲ್‌ ಮನೋಧರ್ಮದವರು ಯಾವತ್ತು ಕ್ಷೇಮದ ವೈಚಾರಿಕತೆಗೆ- ಇರುವುದರ ಸಮರ್ಥನೆಗೆ- ಜಾರುವರೋ ಹೇಳಲಾಗದು. ಲಿಬರಲ್‌ ಮನೋಧರ್ಮದವನು ಸುಸ್ತಾದಾಗ ಕನ್ಸರ್ವೇಟಿವ್‌ ಆಗಿಬಿಡುತ್ತಾನೆ. ಇಸ್ರೇಲಿಗೆ ಹೋದ ಬೆಲ್ಲೋ ಪ್ಯಾಲೆಸ್ಟೀನರ ನೋವು ಸಂಕಟಗಳಿಗೆ ಸ್ಪಂದಿಸಲಾರದೇ ಹೋದ. ಶಿಕಾಗೋ ವಿಶ್ವ ವಿದ್ಯಾಲಯದ ಪಕ್ಕದ ಲೋಕದಿಂದ ಶ್ರಮವಹಿಸಿ ಹೊರ ಬಂದಿದ್ದ ಸಾಲ್‌ ಬೆಲ್ಲೋ ತನ್ನದೊಂದು ಕಾದಂಬರಿಯಲ್ಲಿ ಒಂದು ಭೀಕರ ಅನುಭವವನ್ನು ವರ್ಣಿಸುತ್ತಾನೆ. ಕಾದಂಬರಿಯ ನಾಯಕನನ್ನು ಧಾಂಡಿಗನಾದ ಕರಿಯನೊಬ್ಬ ಓಣಿಯ ಮೂಲೆಯೊಂದಕ್ಕೆ ಕರೆದುಕೊಂಡು ಹೋಗಿ ತನ್ನ ಪ್ಯಾಂಟನ್ನು ಬಿಚ್ಚಿ ಶಿಶ್ನ ದರ್ಶನ ಮಾಡಿಸುತ್ತಾನೆ. ಇಂಥ ಘಟನೆಗಳನ್ನು ಬೆಲ್ಲೋ ಸೂಕ್ಷ್ಮದಲ್ಲಿ ವರ್ಣಿಸುತ್ತಾನೆ. ಒರಟಾಗಿ ಏನೂ ಹೇಳುವುದಿಲ್ಲ. ಆದರೆ ಒಂದು ಬಗೆಯ ನಯನಾಜೂಕು ಕಾಣೆಯಾಗಿಬಿಟ್ಟಿತಲ್ಲವೆ ನಮ್ಮ ಈ ದುಷ್ಟಕಾಲದಲ್ಲಿ ಎಂಬ ವ್ಯಾಕುಲ ಅಂಥವರ ಬರೆವಣಿಗೆಯಲ್ಲಿ ಆವರಿಸಿಕೊಂಡಿರುತ್ತದೆ.

ಅನುನಯದ ವರ್ತನೆಯ ಸಮುದಾಯ ಜೀವನ ಅಧೋಲೋಕದಿಂದ ಬಂದ ಜನರಿಂದ ಅಲ್ಲಾಡತೊಡಗಿದಾಗ ಲಿಬರಲ್‌ ಮನೋಧರ್ಮದವನು ಮನುಷ್ಯನ ಸಾಧ್ಯತೆಗಳ ಬಗ್ಗೆ ಅನುಮಾನಗಳನ್ನು- ಅಗತ್ಯಕ್ಕಿಂತ ಹೆಚ್ಚಾಗಿ-ತೋರತೊಡಗುತ್ತಾನೆ. ಅಮೆರಿಕಾದ ಘನತೆವೆತ್ತ ಮಹಾನ್‌ ವಿಶ್ವವಿದ್ಯಾಲಯವೊಂದರಲ್ಲಿ ಪಾಠ ಮಾಡುತ್ತಿದ್ದ ಟ್ರಿಲ್ಲಿಂಗ್‌ ಬಂಡೆದ್ದ ವಿದ್ಯಾರ್ಥಿಗಳ ಅಸೌಜನ್ಯದಿಂದ ಕೊನೆಗೂ ಚೇತರಿಸಿಕೊಳ್ಳಲಾರದೆ ಹೋದ ಎಂದು ಕೇಳಿದ್ದೇನೆ. ಬೆಲ್ಲೋ ಬಗ್ಗೆಯಾಗಲೀ ಟ್ರಿಲ್ಲಿಂಗ್‌ ಬಗ್ಗೆಯಾಗಲೀ ನಿರ್ಣಾಯಕವಾಗಿ ಅವರ ಔದಾರ್ಯದ ಮನಸ್ಸು ಹಿಂಸೆಯಿಂದ ಪೂರ್ಣ ಹಿಮ್ಮೆಟ್ಟಿತು ಎಂದು ಹೇಳಲಾಗದು. ಆದರೂ ಮನುಷ್ಯನ ಒಳ್ಳೆಯತನದ ಹಿಂದಿರುವ ರಹಸ್ಯ ಶಕ್ತಿಯ ಬಗ್ಗೆ ಮುಗ್ಧವಾಗಿ ಸ್ಪಂದಿಸುವ ಅನುಭಾವಿಗಳು ಈ ಬಗೆಯ ಲಿಬರಲ್‌ ಮನೋಧರ್ಮದವರಿಗಿಂತ ಮುಂದೆ ಹೋಗಿ ಹೊಸ ಜೀವನಕ್ಕಾಗಿ ತಹತಹಿಸುವ, ಆಗೀಗ ಕ್ರೂರಿಗಳೂ ಆಗುವ ಹೊಸ ಜನರಿಗೆ ಮುಕ್ತರಾಗಿ ಸ್ಪಂದಿಸಬಲ್ಲವರು ಎನ್ನಬಹುದು. ಸೆಕ್ಯುಲರ್‌ ಆದ ಆರ್ವೆಲ್‌ಗೂ ಈ ಶಕ್ತಿ ಇತ್ತು. ಸ್ಪಾನಿಶ್‌ ಸಿವಿಲ್‌ ವಾರ್‌ನಲ್ಲಿ ಎಡಪಂಥೀಯರ ಮೋಸ ದಗಾಗಳಿಂದ ಕ್ರುದ್ಧನಾದ ಆರ್ವೆಲ್‌ ಬಡಜನರ ಬಗ್ಗೆ ಅನುಕಂಪ ಕಳೆದುಕೊಳ್ಳಲಿಲ್ಲ.

ಹತ್ತೊಂಬತ್ತನೇ ಶತಮಾನದ ಫ್ರೆಂಚ್‌ ಕ್ರಾಂತಿಯಿಂದ ಆಕರ್ಷಿತನಾಗಿ ಅನಂತರ ಅದರ ಅನಗತ್ಯ ಕ್ರೌರ್ಯದಿಂದ ಕಂಗೆಟ್ಟ ವರ್ಡ್ಸ್‌ವರ್ತ್‌ ಸಾಮಾನ್ಯ ಮನುಷ್ಯರಲ್ಲಿಟ್ಟ ತನ್ನ ಶ್ರದ್ಧೆ ಕಳೆದುಕೊಳ್ಳಲಿಲ್ಲ. ಆದರೆ ಅವನು ರಿಲಿಜಸ್‌ ಆಗಿದ್ದ.

ನಾನು ಸಾಲ್‌ ಬೆಲ್ಲೋಗೆ ಜೆಪಿ ಹೇಳಿದ್ದನ್ನು ಚರ್ಚಿಸುವ ಹೊತ್ತಿಗಾಗಲೇ ಸಿಮೋನ್‌ ವೇಲ್‌ ಎಂಬಾಕೆಯ ಬಗ್ಗೆ ಕುತೂಹಲಿ ಯಾಗಿದ್ದೆ. ಈ ಆಸಕ್ತಿಯನ್ನ್ನು ಮೊದಲು ನನ್ನಲ್ಲಿ ಹುಟ್ಟಿಸಿದವರು ಸಮಾಜವಾದಿ ಚಳವಳಿಯಲ್ಲಿ ಕ್ರಿಯಾಶೀಲರಾಗಿದ್ದು ಲೋಹಿಯಾರಿಗೆ ಸೆಕ್ರೆಟರಿಯಾಗಿಯೂ ಕೆಲಸ ಮಾಡಿದ್ದ ಕಮಲೇಶ್‌ ಎಂಬುವವರು. ಹಿಂದಿ ಸಾಹಿತ್ಯ ಲೋಕದ ಬಹಳ ಒಳ್ಳೆಯ ಮನಸ್ಸುಗಳು ಇವತ್ತಿಗೂ ಕಮಲೇಶ್‌ ಬರೆದ ಒಂದು ಕವನ ಸಂಕಲನವನ್ನು ಈ ಕಾಲದ ಅತ್ಯುತ್ತಮ ಕೃತಿಗಳಲ್ಲಿ ಒಂದು ಎಂದು ಭಾವಿಸುತ್ತವೆ.

ಈ ಕಮಲೇಶ್‌ ನನ್ನ ಆತ್ಮೀಯರಲ್ಲಿ ಒಬ್ಬರು. ಜಾರ್ಜ್‌ ಫೆರ್ನಾಂಡಿಸರ ಬರೋಡಾ ಡೈನಮೈಟ್‌ ಚಳವಳಿಯಲ್ಲಿ ಇವರೂ ಪಾಲುದಾರರು. ಕಮಲೇಶ್‌ ತುರ್ತು ಪರಿಸ್ಥಿಯ ದಿನಗಳಲ್ಲಿ ಜೈಲು ವಾಸ ಮಾಡಿದ್ದರು. ಈ ಕಮಲೇಶರೇ ಸಿಮೋನ್‌ ವೇಲ್‌ನ `ಗೇಟ್‌ ವೇ ಟು ಗಾಡ್‌’ ಎನ್ನುವ ಪುಸ್ತಕವನ್ನು ಮೊದಲು ನನಗೆ ಓದಿಸಿದವರು. ಆನಂತರದಲ್ಲಿ ಸಿಮೋನ್‌ ವೇಲ್‌ನ ಸರ್ಚ್‌ ಫಾರ್‌ ರೂಟ್ಸ್‌ ಮತ್ತು ಅಪ್ರೆಶನ್‌ ಅಂಡ್‌ ಲಿಬರ್ಟಿ ಇತ್ಯಾದಿಗಳನ್ನು ಓದಲು ತೊಡಗಿದೆ. ನನಗೆ ಇನ್ನೂ ಸಿಮೋನ್‌ ವೇಲ್‌ಳ ತಾತ್ವಿಕ ಭಾಷೆಯ ಒಳಾರ್ಥಗಳು ದಕ್ಕಿಲ್ಲ. ಆದರೆ ಅವಳ ಯೋಚನೆಗಳ ಸಾನ್ನಿಧ್ಯದಲ್ಲಿ ಸುಮಾರು ಮೂವ್ವತ್ತು ವರ್ಷಗಳನ್ನಾದರೂ ಕಳೆದಿದ್ದೇನೆ.

ಸಿಮೋನ್‌ ವೇಲ್‌ ಈ ಯುಗದ ವಿಭೂತಿ ಶಕ್ತಿಗಳಲ್ಲಿ ಒಬ್ಬರು ಎಂಬುದರಲ್ಲ್ಲಿ ನನಗೆ ಅನುಮಾನವಿಲ್ಲ. ಅವರನ್ನು ಒಪ್ಪುವುದಾಗಲೀ ಒಪ್ಪದಿರುವುದಾಗಲೀ ಮುಖ್ಯವಲ್ಲ. ಅವರ ಬದುಕು ಮತ್ತು ವಿಚಾರಗಳ ಸಂಪರ್ಕ ಲಭಿಸಿರಬೇಕು. ಕಮಲೇಶ್‌ ಅಲ್ಲದೆ ಸಿಮೋನ್‌ ವೇಲ್‌ನಿಂದ ತುಂಬ ಪ್ರಭಾವಿತರಾದ ಇನ್ನೊಬ್ಬ ಹಿಂದಿ ಲೇಖಕರೆಂದರೆ ನಿರ್ಮಲ್‌ ವರ್ಮ. ಭಾರತದಂತಹ ಕಡುಬಡವರ ದೇಶದಲ್ಲಿ ಬಡತನವನ್ನು ಬಹ್ಯುತ್ಪನ್ನದ ಮುಖಾಂತರ ನಿವಾರಿಸಕೊಳ್ಳುವುದು ಸಾಧ್ಯವೆಂದು ಯೋಚಿಸುವ ಬಂಡವಾಳ ಶಾಹಿಯಾಗಲೀ ಕಮನಿಸ್ಟರೇ ಆಗಲಿ ಭೌತಿಕ ನೆಲೆಯಲ್ಲಿಯೇ ಬಡತನದ ನಿವಾರಣೆ ಸಾಧ್ಯ ಎಂದು ತಿಳಿಯುವರು. ಆದರೆ ಈಗಿಂದೀಗಲೇ ಕಷ್ಟ ಕಾರ್ಪಣ್ಯದಲ್ಲಿ ಬದುಕಲೇ ಬೇಕಾಗಿ ಬಂದವರು ಉಲ್ಲಸಿತರಾಗಿ ಅರಳಲು ಸಾಧ್ಯ ಎಂದು ಭಾವಿಸುವ ಮನಸ್ಸುಗಳು ನನಗೆ ಮುಖ್ಯರಾಗುತ್ತ ಹೋಗಿದ್ದಾರೆ. ಕಬೀರ್‌, ಬಸವ, ತುಕಾರಾಮ್‌, ರಮಣ, ಪರಮಹಂಸ ಈ ಬಗೆಯವರು.

ಲೋಹಿಯಾ, ಮಾರ್ಕ್ಸ್‌ ಅಲ್ಲದೆ, ಜಿಡ್ಡು ಕೃಷ್ಣಮೂರ್ತಿಯಂಥವರಿಂದಲೂ ಪ್ರಭಾವಿತರಾದ ನನ್ನಂಥವರಿಗೆ ಸಿಮೋನ್‌ ವೇಲ್‌ ಸಹಜವಾಗಿಯೇ ಆಪ್ತವಾದಳು. ಆದರೆ ಇಲ್ಲಿಯೇ ಒಂದು ಮಾತನ್ನು ಹೇಳಿ ಮುಂದುವರಿಯುತ್ತೇನೆ. ಅದೊಂದು ಮುಖ್ಯವಾದ ಮಾತು; ನನ್ನ ಒಳಗೇ ಬಾರಿಸುವ ಒಂದು ಎಚ್ಚರದ ಗಂಟೆ. ಆಪತ್ತಿನ ಸಮಯದಲ್ಲಿ ಲಿಬರಲ್‌ ಮನೋಧರ್ಮದವನು ಜಾರಬಲ್ಲಂತೆಯೇ ರಿಲಿಜಿಯಸ್‌ ಆದ ಒಳ ಪ್ರೇರಣೆಯಿಂದ ಈ ಪ್ರಪಂಚಕ್ಕೆ ತುಡಿಯುವ ಮನಸ್ಸೂ ಜಾರಬಲ್ಲದು.

ಜಿಡ್ಡು ಕೃಷ್ಣಮೂರ್ತಿಯವರ ಅಪಾರವಾದ ಒಳನೋಟಗಳು ಫಲದಾಯಕವಾದದ್ದು ಶ್ರೀಮಂತರ ಮಕ್ಕಳು ಮಾತ್ರ ಓದಬಲ್ಲ ಶಾಲೆಗಳಲ್ಲಿ. ರಾಮಕೃಷ್ಣಾಶ್ರಮದ ಶಾಲೆಗಳೂ ಮೀಸಲಾತಿಯಿಂದ ಬಿಡುಗಡೆಯಾಗಲು ತಾವು ಹಿಂದೂಗಳೇ ಅಲ್ಲ ಮತ್ತು ಅಲ್ಪಸಂಖ್ಯಾತರ ಸಂಸ್ಥೆ ಎಂದು ಕೋರ್ಟಿಗೆ ಹೋಗಿದ್ದವು. ಹಾಗೆಯೇ ಸಿಮೋನ್‌ ವೇಲ್‌ನ ಉಜ್ವಲವಾದ ವೈಚಾರಿಕತೆಯನ್ನು ನನಗೆ ಪರಿಚಯಿಸಿದ ನನ್ನ ಹಿಂದಿ ಗೆಳೆಯರೂ ಭಾರತ ತನ್ನ ತೇಜಸ್ಸನ್ನು ಮರಳಿ ಪಡೆಯಲು ಹಿಂದುತ್ವದ ಪುನರುಜ್ಜೀವನ ಅಗತ್ಯವೆಂದು ಬಹಳ ಗಹನವಾಗಿಯೇ ಪ್ರಾಮಾಣಿಕವಾಗಿಯೇ ತಿಳಿದವರಾದರು.

ಅಂದರೆ ಸಾಲ್‌ ಬೆಲ್ಲೋ ಪ್ಯಾಲಿಸ್ಟೀನಿಗೆ ಮಿಡಿಯಲಾರದೆ ಹೋದಂತೆ ಇವರು ಗುಜರಾತಿನ ಹಿಂಸೆಗೆ ಮಿಡಿಯಲಾರದವರಾದರು. ಮಿಡಿದಾಗಲೂ ಈ ಹಿಂಸೆಗೆ ಕಾರಣವಾದವರ ದುಷ್ಟರ ಹಿಂಸೆಯ ಬಗ್ಗೆಯೂ ಮಾತನಾಡಬೇಕೆಂಬ ಒತ್ತಾಯವುಳ್ಳವ ರಾದರು. ಅಂದರೆ ಹಿಂಸೆ-ಪ್ರತಿ ಹಿಂಸೆ ವಾದಗ್ರಸ್ತವಾಗಿ ಬಿಟ್ಟ ಮೇಲೆ ಅದೊಂದು ನಮ್ಮನ್ನು ನಿಜವಾಗಿ ಕಾಡುವ ಆತ್ಮೀಯ ವಿಷಯವಾಗಿ ಉಳಿಯುವುದೇ ಇಲ್ಲ. ಸಮುದಾಯದ ನೆಮ್ಮದಿಗಿಂತಲೂ ಬಹ್ಯುತ್ಪನ್ನದ ಅಭಿವೃದ್ಧಿಯೇ ಮುಖ್ಯವೆಂದು ಕಾಣುವವರ ಹಾಗೂ ೞಸೆಕ್ಯುಲರ್‌ ಮತ್ತು ವೈಜ್ಞಾನಿಕವೆಂದು ತಮ್ಮನ್ನು ಭಾವಿಸಿಕೊಂಡಿರುವವರ ನಡುವೆ ಸಿಮೋನ್‌ ವೇಲ್‌ ನಾವು ಕಾಣಲು ಬಯಸದ್ದನ್ನು ಕಾಣುವಂತೆ ಮಾಡುತ್ತಾರೆ. ಆಧುನಿಕ ಜೀವನದ ನೀರವತೆ ಮತ್ತು ಹಿಂಸೆಯ ಮೂಲ ಕಾಣುವಂತೆ ಮಾಡುತ್ತಾರೆ. ಈ ಬಗ್ಗೆ ಮುಂದೆ ಬರೆಯಲಿದ್ದೇನೆ.

-ಯು.ಆರ್ . ಅನಂತಮೂರ್ತಿ