Monthly Archives: February 2007

TOI Kannada: Journalists as Translators

ಭಾಷಾಂತರದ ಗಂಡಾಂತರ ಲೇಖನಕ್ಕೆ ಪೂರಕವಾದ ಅನೇಕ ಅಂಶಗಳಿರುವ ಈ ಲೇಖನದ ಕರ್ತೃ ಬಿ.ಪಿ. ಸಂಜಯ ([email protected]) ದ ಹೂಟ್ ಎಂಬ ಅಂತರ್ಜಾಲ ತಾಣ ಪ್ರಕಟಿಸಿದ್ದ ಈ ಲೇಖನವನ್ನು ಮರುಪ್ರಕಟಿಸಲಾಗುತ್ತಿದೆ.

ಜನ ಸಮೂಹದ ಒಟ್ಟಾರೆ ಶೂರರು!

 

ಜೋಸ್ ಾರ್ಟೆಗಾ

 

ನಾನು ಮಹಾರಾಜಾ ಕಾಲೇಜಿನಲ್ಲಿ ಎಂ. ಎ. ಓದುತ್ತ ಇದ್ದಾಗ ಪ್ರತಿ ನಿತ್ಯ ಸಂಜೆ ದಾಸ್‌ ಪ್ರಕಾಶ್‌ ಹೋಟೆಲಿನ ವೃತ್ತದಲ್ಲಿ ಇದ್ದ ಕಾಫಿ ಹೌಸ್‌ನಲ್ಲಿ ಹರಟಲು ಸೇರುತ್ತ ಇದ್ದೆವು. ಮೇಲಿಂದ ಮೇಲೆ ಒನ್‌ ಬೈ ಟು ಕಾಫಿಯನ್ನು ಆರ್ಡರ್‌ ಮಾಡಿ ಬೆತ್ತದ ಕುರ್ಚಿಗಳ ಮೇಲೆ ಕೂತು ಕಾಫಿ ಸವಿಯುತ್ತ ನಾವು ಓದಿದ್ದನ್ನೆಲ್ಲ ಎಷ್ಟು ಉತ್ಕಟವಾಗಿ ಚರ್ಚಿಸುತ್ತಾ ಇದ್ದೆವು ಎಂದು ಈಗ ಆಶ್ಚರ್ಯವಾಗುತ್ತದೆ. ನಮ್ಮ ಜೊತೆ ಅಡಿಗರೂ ಇರುತ್ತಿದ್ದರು. ಅವರು ಏನೇ ಹೊಸದನ್ನು ಓದಲಿ, ಅದನ್ನು ನಮಗೆ ಓದಿಸುತ್ತಿದ್ದರು. ಹಾಗೆಯೇ ನಾವು ಓದಿದ್ದನ್ನು ಅವರಿಗೆ ಓದಿಸುತ್ತಿದ್ದೆವು. ನನಗೆ ಇಷ್ಟವಾದ ಲೋಹಿಯಾರ ಪ್ರಬಂಧಗಳನ್ನು ಲಾರೆನ್ಸ್‌ನ ಪ್ರಬಂಧಗಳನ್ನು ಅಡಿಗರಿಗೆ ಓದಿಸಿದ್ದೆ- ರಾಜಾಜಿಯ ಕನ್ಸರ್ವೆಟಿವ್‌ ನಿಲುವುಗಳನ್ನು ಮೆಚ್ಚುತ್ತಿದ್ದ ಅಡಿಗರಿಗೆ ಈ ಲೇಖಕ ಚಿಂತಕರೂ ಬೇಕಾದವರಾದರು. ಅಡಿಗರ ಮುಖೇನ ನನ್ನ ಅರಿವಿಗೆ ಬಂದವರಲ್ಲಿ ಮುಖ್ಯವಾಗಿ ಇಬ್ಬರು: ಸ್ಪ್ಯಾನಿಷ್‌ ಚಿಂತಕ ಆರ್ಟೆಗಾ ಗ್ಯಾಸೆ (José Ortega y Gasset) ಮತ್ತು ಜಗತ್ತಿನ ನಾಗರೀಕತೆಗಳ ಬಗ್ಗೆ ಬರೆದ ತಾತ್ವಿಕ ಇತಿಹಾಸಕಾರ ಆರ್ನಾಲ್ಡ್‌ ಟಾಯನ್‌ ಬೀ. ನಮ್ಮ ನಮ್ಮ ವಿಶಿಷ್ಟ ಅಂತರ್ಮುಖಿ ಅಗತ್ಯಗಳಲ್ಲಿ ಈ ಚಿಂತಕರು ನಮ್ಮ ಒಳಗಿನ ಲೋಕವನ್ನು ಬೆಳೆಸಿದರು. ಲೇಖಕರಾದ ನಮ್ಮ ಬರೆವಣಿಗೆಯ ಮುಖ್ಯ ರೂಪಕಗಳನ್ನು ಸೃಷ್ಟಿಸಲು ಕಾರಣರಾದರು. ಅಂದರೆ ತಾರ್ಕಿಕ ವಿರೋಧಗಳಲ್ಲಿ ಅವರ ವಿಚಾರಗಳು ನಮ್ಮ ಒಳಗೆ ಬರದೆ, ರೂಪಕಗಳ ಸಂಕಿರಣಗಳಾಗಿ ನಮಗೆ ಇವರು ಒದಗಿದರು. ಅಡಿಗರ ಕಾವ್ಯದಲ್ಲಂತೂ ಈ ಚಿಂತಕರು ಭಾರತೀಯ ಪುರಾಣಲೋಕದಲ್ಲಿ ಬೆರೆತು ಮರುಹುಟ್ಟು ಪಡೆದರು.