Monthly Archives: July 2006

ರಾಜಕೀಯದ ಪತನ

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಈಗಿನ ರಾಜಕಾರಣ ಹೊಲಸಾಗಿದೆ ಎಂದು ಹೇಳಲು ಹೊರಟಿದ್ದೇ ನನಗೆ ಈ ಗಾದೆ -ನಾನು ಈಗ ಮಾತನ್ನಾಡುತ್ತಿರುವುದರ ಬಗ್ಗೆ ಕೂಡ- ಸತ್ಯವೆನ್ನಿಸಿತು. ಸದ್ಯ ಆಗುತ್ತಿರುವುದಕ್ಕೆ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪಾಲುದಾರರು ಎಂದು ತಿಳಿದು ಮಾತನ್ನಾಡಲು ಪ್ರಯತ್ನಿಸುವುದು ಸಾಧ್ಯವೆ ನೋಡುವೆ.

ನಮ್ಮ ಹಾಸನದ ರಾಜಾರಾಯರು

ಅನಂತಮೂರ್ತಿ ಕುಟುಂಬದ ಜತೆ ರಾಜಾರಾಯರು ಮತ್ತು ಪತ್ನಿ ಸೂಸನ್

ಚೆಗೆ ಬೆಂಗಳೂರಿಗೆ ಅಮೆರಿಕದಲ್ಲಿರುವ ಬಂಗಾಳದ ಖ್ಯಾತ ಲೇಖಕಿ ಗಾಯತ್ರಿ ಸ್ಪೀವಾಕ್‌ ಬಂದಿದ್ದರು. ಅವರು ತಮ್ಮ ಕ್ರಾಂತಿಕಾರಕವಾದ `ಸಬಾಲ್ಟರನ್‌' ರಾಜಕೀಯ ಸಾಂಸ್ಕೃತಿಕ ಕ್ರಿಯೆಗಳಿಗೂ, ಜೊತೆಗೆ ಬಂಗಾಳಿಯಿಂದಲೂ ಫ್ರೆಂಚ್‌ನಿಂದಲೂ ತಾವು ಮಾಡುವ ಭಾಷಾಂತರಗಳಿಗೂ ಸಮಾನವಾದ ಭೂಮಿಕೆಯೊಂದನ್ನು ಸೃಷ್ಟಿಸಿಕೊಳ್ಳಲು `ಅನುವಾದ' ಎನ್ನುವ ಪದವನ್ನು ಬಳಸಿದರು. ಈ `ಅನುವಾದ'ಕ್ಕೆ ಅವರ ತಾತ್ವಿಕತೆ ಹಚ್ಚಿದ ಅರ್ಥಗಳು ಅನೇಕ. ಅನುಸರಿಸಿದ್ದು ಎನ್ನುವುದು ಒಂದು ಅರ್ಥ. ಅನಂತರದ್ದು-ಕಾಲದಲ್ಲಿ ಅಲ್ಲ; ತದ್ಗತವಾಗುವ ಸಾನ್ನಿಧ್ಯದಲ್ಲಿ- ಎನ್ನುವುದು ಇನ್ನೊಂದು ಅರ್ಥ.

ನಾನು, ಓ ವಿ ವಿಜಯನ್, ಅಯ್ಯಪ್ಪ ಮತ್ತು ರಾಮ

ಕೇರಳದ ಓ.ವಿ.ವಿಜಯನ್‌ ಈ ನಮ್ಮ ಯುಗದ ಅತ್ಯಂತ ಮಹತ್ವದ ಲೇಖಕರಲ್ಲಿ ಒಬ್ಬರು. ಈಗ ಅವರು ಬದುಕಿಲ್ಲ. ಆದರೆ ಹಲವು ಮಲೆಯಾಳಿ ಓದುಗರಿಗೆ ಇವತ್ತಿಗೂ ಅಚ್ಚುಮೆಚ್ಚಿನ ಲೇಖಕ ವಿಜಯನ್‌. ಅವರ `ಕಸಾಕಿನ ಇತಿಹಾಸ' ಎನ್ನುವ ಕಾದಂಬರಿಯನ್ನು ಪುಸ್ತಕದ ಸಹಾಯವಿಲ್ಲದೆ ಇಡೀ ಪೇಜುಗಳನ್ನು ನೆನಪಿನಿಂದ ವಾಚಿಸುವವರನ್ನು ನಾನು ನೋಡಿದ್ದೇನೆ. ಅದು ಕಾದಂಬರಿಯಾಗಿದ್ದೂ ಒಂದು ದೀರ್ಘ ಕವನದಂತಿದೆ. ಈ ಕಾಲದ ಎಲ್ಲ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಹುಡುಕಾಟದಲ್ಲಿ ತನ್ನ ಇಡೀ ಜೀವನವನ್ನು ವಿಜಯನ್‌ ಕಳೆದರು. ಕಮ್ಯುನಿಸ್ಟ್‌ ಆಗಿ ಕಾರ್ಟೂನುಗಳನ್ನು ಬರೆಯುತ್ತಿದ್ದ ವಿಜಯನ್‌ ಆಗಿನ ಪ್ರಸಿದ್ಧ ಶಂಕರ್ಸ್‌ ವೀಕ್ಲಿಯಲ್ಲಿ ಕೆಲಸ ಮಾಡುತ್ತಿದ್ದರು. ಆಮೇಲೆ ಸ್ಟಾಲಿನ್‌ ವಿರೋಧಿಯಾದರು. ವಿಜಯನ್‌ ಎಮರ್ಜೆನ್ಸಿ ಕಾಲದಲ್ಲಿ ಕಾರ್ಟೂನುಗಳನ್ನು ಬರೆಯುವುದನ್ನು ಬಿಟ್ಟರು. ಪ್ರಜಾತಂತ್ರದಲ್ಲಿ ಮಾತ್ರ ವ್ಯಂಗ್ಯ ಚಿತ್ರ ಕಲೆ ಸಾಧ್ಯವೆಂದು ಅವರ ನಂಬಿಕೆಯಾಗಿತ್ತು. ಕಟುವಾದ ವಿಡಂಬನೆಯಲ್ಲಿ ಎಲ್ಲ ಬಗೆಯ ಆತ್ಮವಂಚನೆಗಳನ್ನೂ ಪರ ವಂಚನೆಗಳನ್ನೂ ಬಯಲಿಗೆಳೆಯುತ್ತಿದ್ದ ವಿಜಯನ್‌ ಜನಪ್ರಿಯನಾಗಿ ಬರೆಯಲು ಪ್ರಯತ್ನ ಪಟ್ಟವರೇ ಅಲ್ಲ.

ಪೂರ್ವಕ್ಕೆ ಮುಖ: ಪಶ್ಚಿಮಕ್ಕೆ ಪ್ರಯಾಣ

ಭಾರತವನ್ನು ಪಾಶ್ಚಿಮಾತ್ಯ ಆಧುನಿಕ ನಾಗರಿಕತೆಯ ದಿಕ್ಕಿನಲ್ಲಿ ಬೆಳೆಸಿದ ನೆಹರೂ ಬಲಗೈಯಾಗಿದ್ದವರು ಡಾಕ್ಟರ್‌ ಹೋಮಿಬಾಬಾ. ಗಾಂಧಿಯವರ ಕನಸಿಗೆ ಅನ್ಯವಾದ ಆದರೆ ಗಾಂಧೀಜಿಯ ಆಶೀರ್ವಾದವನ್ನು ಪಡೆದ, ನೆಹರೂರವರ ಆಧುನಿಕ ನಾಗರಿಕತೆಯ ವ್ಯಸನವೆನ್ನಬಹುದಾದ ಕನಸು ಇವರದು. ಆಧ್ಯಾತ್ಮಿಕವಾಗಿ ಅಂದರೆ ನಿರಾಯಾಸವಾಗಿ, ಗಾಂಧಿಯ ಪರವಾಗಿಯೂ, ಲೌಕಿಕವಾಗಿ ಅಂದರೆ ತೊಡಗಿದ ನಿತ್ಯವಾಗಿ, ಐರೋಪ್ಯ ಆಧುನಿಕತೆಯ ಪರವಾಗಿಯೂ ಇರುವ, ಎಲ್ಲೆಲ್ಲೂ ಇರುವ, ಹೀಗಿರುವುದೇ ಸಹಜವೆನ್ನಿಸಲು ಶುರುವಾಗಿರುವ ನಮ್ಮ ನಿಮ್ಮಂತಹವರಿಗೆ ಅನುಕೂಲರು.