Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ರಂಪ ಮತ್ತು ಮೂರು ಮಂಗಗಳು: ಗಣಿಗಾರಿಕೆಯ ಬಗ್ಗೆ ಮುಂದುವರಿದ ಧ್ಯಾನ

ನಿತ್ಯದ ಸಾಂಸಾರಿಕ ಗೋಳಿನ, ಕುಡಿತದಲ್ಲಿ ಅದನ್ನು ಮರೆಯುವೆನೆಂದು ಭ್ರಮಿಸುತ್ತಿದ್ದ ನನ್ನ ಗೆಳೆಯನೊಬ್ಬ ಕಂಡಿದ್ದೇ ಹೇಳುತ್ತ ಇದ್ದ ಒಂದು ಮಾತೆಂದರೆ `ಇವತ್ತು ಇನ್ನೊಂದು ರಂಪ ಕಣೋ.' ಸಿಗರೇಟನ್ನು ಬೀಸುವ ಗಾಳಿಯಲ್ಲೂ ಕಡ್ಡಿಗೀರಿ ಹಚ್ಚಿಸಬಲ್ಲವನಾಗಿದ್ದ ಅವನು ಹೇಳುತ್ತಿದ್ದ ಸಲಿಗೆಯ ಮಾತಿದು. ಆರಾಮಾಗಿ ಸಿಗರೇಟು ಸೇದುತ್ತ ಅದೇನೆಂದು ಅವನು ಹೇಳಬೇಕಾಗಿರಲಿಲ್ಲ; ನಾನೂ ಕೇಳಬೇಕಾಗಿರಲಿಲ್ಲ.

ಕನಿಷ್ಠದಲ್ಲಿ ಗರಿಷ್ಠವನ್ನು ಹೊಳೆಸಬಲ್ಲ ಕಲೆ

ಬೋಳು ತಲೆಯ ಪ್ರೇಮಿ

ಪೂರ್ಣಗೊಂಡ ಸ್ಕ್ರಿಪ್ಟ್ ನಿಂದ ನಾನು ಪ್ರಾರಂಭಿಸುವುದೇ ಇಲ್ಲ. ನನ್ನ ಮನಸ್ಸಿನಲ್ಲಿ ಒಂದು ಪಾತ್ರ ಹುಟ್ಚಿಕೊಂಡಿರುತ್ತದೆ. ಆ ಪಾತ್ರದಂಥವನೊಬ್ಬ ಅಥವಾ ಒಬ್ಬಳು ನನಗೆ ನಿಜ ಜೀವನದಲ್ಲಿ ಪ್ರತ್ಯಕ್ಷವಾಗುವ ತನಕ ನಾನು ಟಿಪ್ಪಣಿಗಳನ್ನೂ ಮಾಡಿಕೊಳ್ಳಲೂ ಹೋಗುವುದಿಲ್ಲ. ಅಂಥವರೊಬ್ಬರು ಸಿಕ್ಕ ಮೇಲೆ ನನಗವರು ಆಪ್ತರಾಗುವಷ್ಟು ಅವರ ಜತೆ ಕಾಲ ಕಳೆಯುತ್ತೇನೆ. ಹೀಗಾಗಿ ನಾನು ಮಾಡುವ ಟಿಪ್ಪಣಿಗಳು ನನ್ನ ಮನಸ್ಸಿನಲ್ಲಿರುವ ಪಾತ್ರದ ಬಗ್ಗೆಯಾಗಿರದೆ ನಿಜ ಜೀವನದಲ್ಲಿ ನಾನು ಕಂಡವರ ಬಗ್ಗೆ ಆಗಿರುತ್ತದೆ ಇದೊಂದು ದೀರ್ಘ ಪ್ರಕ್ರಿಯೆ; ಐದಾರು ತಿಂಗಳುಗಳಾದರೂ ಹಿಡಿಯುವ ಪ್ರಕ್ರಿಯೆ. ಹೀಗಾದಾಗ ನಾನು ಕೆಲವು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತೇನೆಯೇ ಹೊರತು ಅವರ ಸಂಭಾಷಣೆಗಳನ್ನು ಬರೆದಿಟ್ಟುಕೊಳ್ಳುವುದಿಲ್ಲ. ಇಡೀ ಸಂಭಾಷಣೆಗಳನ್ನು ಬರೆಯುವುದೇ ಇಲ್ಲ. ಆದುದರಿಂದ ಚಿತ್ರೀಕರಣ ಪ್ರಾರಂಭ ಮಾಡಿದಾಗ ರಿಹರ್ಸಲ್ ಮಾಡುವ ಪ್ರಮೇಯವೇ ಬರುವುದಿಲ್ಲ. ನನಗೇ ಅವರು ಹತ್ತಿರವಾಗುವುದರ ಬದಲು ಅವರಿಗೇ ನಾನು ಹತ್ತಿರವಾಗುತ್ತಾ ಹೋಗುತ್ತೇನೆ. ನಾನು ಅವರಿಗೆ ಕೊಡುವುದು ಇಲ್ಲವೆಂದಲ್ಲ. ಆದರೆ ಅವರಿಂದ ನಾನು ಹೆಚ್ಚು ಪಡೆದುಕೊಳ್ಳುತ್ತೇನೆ.

-ಅಬ್ಬಾಸ್ ಕಿರೋಸ್ತಾಮಿ