ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಬೆಂಗಳೂರು ಬೆಂಗಳೂರೇ ಆದರೆ ಬೆಚ್ಚುವುದೇಕೆ?
ಏನಕೇನ ಪ್ರಕಾರೇಣ ಪ್ರಸಿದ್ಧ ಪುರುಷನಾಗಿಬಿಡು ಎಂಬ ಒಂದು ವ್ಯಂಗ್ಯದ ಮಾತಿದೆ. ನಾನೀಗ ಆಗಿಬಿಟ್ಟಿದ್ದೇನೆ. ಏನನ್ನೂ ಹರಿಯದೆ. ಏನನ್ನೂ ಕೆಡವದೆ. ಏನನ್ನೂ ಬರೆಯದೆ. ಲಂಡನ್ನಿನಿಂದ ಬಿಬಿಸಿಯವರು ಮೂರು ಬಾರಿ ಕರೆದು ವಿಚಾರಿಸಿಕೊಂಡರು. `ಯುಎಸ್‌ಎ ಟುಡೆ’ ಕರೆದು ಅರ್ಧ ಗಂಟೆ ಕಾಲ ಮಾತಾಡಿಸಿದರು. `ನ್ಯೂಯಾರ್ಕ್ ಟೈಂಸ್’ ನವರು ಇಲ್ಲಿಯೇ ಇರುವ ಪತ್ರಕರ್ತರೊಬ್ಬರಿಂದ ಬೇಕಾದ ಮಾಹಿತಿ ಪಡೆದರು. ಇನ್ನು ಉಳಿದ ನಮ್ಮವರೇ ಬಿಡಿ: ಎನ್‌ಡಿಟಿವಿ, ಟೈಮ್ಸ್ ನಾನಿದ್ದಲ್ಲೇ ಬಂದು, ತಮ್ಮಲ್ಲಿಗೂ ಕರೆಸಿಕೊಂಡು ಮಾತಾಡಿಸಿದರು. ಹಾಸ್ಯದಲ್ಲಿ ನಾನೀಗ ಮಾತಾಡುತ್ತಿದ್ದರೂ ನಿಮಗೆ ಕೊಚ್ಚಿಕೊಂಡಂತೆ ಕಂಡೀತೆಂದು ಉಳಿದ ವಿವರಗಳನ್ನು ಬಿಟ್ಟಿದ್ದೇನೆ.
ಉತ್ತರ ಕೊರಿಯಾ ಜತೆಗೊಂದು ರಾಗಿ ಸಂಬಂಧ

ಉತ್ತರ ಕೊರಿಯಾದಲ್ಲಿ ನಾನು ಓಡಾಡಿದ್ದು ಎಂಬತ್ತರ ದಶಕದ ಕೊನೆಯಲ್ಲಿ, ನಾನು ಕೇರಳದಲ್ಲಿದ್ದಾಗ. ಅದರ ರಾಜಧಾನಿ ಪ್ಯಾಂಗ್ ಯಾಂಗ್ ಗೆ ನೇರವಾಗಿ ಹೋಗುವಂತೆ ಇರಲಿಲ್ಲ. ಚೀನಾದ ಬೀಜಿಂಗ್‌ನಲ್ಲಿ ವಿಮಾನದಲ್ಲಿ ಹೋಗಿ ಇಳಿದು, ಅಲ್ಲಿನ ನಮ್ಮ ರಾಯಭಾರ ಕಛೇರಿಯ ಸಹಾಯ ಪಡೆದು ರೈಲು ಹತ್ತಿ ಪ್ರಯಾಣಮಾಡಿ ಪ್ಯಾಂಗ್ ಯಾಂಗ್ ತಲುಪಬೇಕು. ಹೆಚ್ಚು ಕಡಿಮೆ ಪ್ರತಿವಾರ ಹಿಂದೂ ಪತ್ರಿಕೆಯಲ್ಲಿ ಮಹಾನಾಯಕ ಕಿಮ್ ಚಿತ್ರದಡಿ ಇಡೀ ಪುಟದಲ್ಲಿ ಸಣ್ಣ ಅಕ್ಷರದಲ್ಲಿ ಪ್ರಕಟವಾಗುತ್ತಿದ್ದ ಉತ್ತರ ಕೊರಿಯಾ ಸರ್ಕಾರದ ಜಾಹಿರಾತನ್ನು (ತನ್ನ ಅಸ್ತಿತ್ವವನ್ನೇ ದಾಖಲಿಸಿ ಮುಂದೊಡ್ಡಿಕೊಳ್ಳುವ ವೈಚಿತ್ರ್ಯವನ್ನು) ನೋಡಿ ನೋಡಿಯೇ ಬೇಸರವಾಗಿದ್ದ ನನಗೆ ಅನಿರೀಕ್ಷಿತ ಅನುಭವ ಕಾದಿತ್ತು. ಆ ಬಗ್ಗೆ ಈ ಲೇಖನ.