ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಎಂ.ಡಿ.ಎನ್.: ಕರ್ನಾಟಕ ರಾಜಕೀಯದ ಒಬ್ಬ ಮಹಾತಾತ್ವಿಕ
ಪ್ರೊ. ನಂಜುಂಡಸ್ವಾಮಿ ನನಗೆ ಪರಿಚಯವಾದದ್ದು 60ರ ದಶಕದಲ್ಲಿ. 1966ನೇ ಇಸವಿಯಲ್ಲಿ ನಾನು ಇಂಗ್ಲೆಂಡಿನಿಂದ ಹಿಂದಕ್ಕೆ ಬಂದು ಕೆಲ ಕಾಲದವರೆಗೆ ಮೈಸೂರಿನ ಸರಸ್ವತಿಪುರಂನ ಏಳನೇ ಮೈನ್‌ನಲ್ಲಿ ವಾಸಿಸುತ್ತಿದ್ದೆ. ಆಗ ಯಾವಾಗಲೂ ನಮ್ಮ ಮನೆಯಲ್ಲಿ ಬಿ.ಎಸ್. ಆಚಾರ್ ಎನ್ನುವ ಒಬ್ಬ ಗೆಳೆಯ ಇರುತ್ತಿದ್ದರು.
ಸಾಮಾಜಿಕ ಸ್ಥಿತ್ಯಂತರಕ್ಕೆ ಪ್ರಯತ್ನಿಸಿದ ನಾಲ್ವರು ರಾಜಕಾರಣಿಗಳು
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ತಾತ್ವಿಕವಾಗಿ ಯೋಚಿಸಲ್ಲವರಾಗಿದ್ದ ಕೆಲವು ರಾಜಕಾರಣಿಗಳು ಇದ್ದರು; ವ್ಯವಸ್ಥೆಯನ್ನು ಅಚ್ಚುಕಟ್ಟಾಗಿನಿರ್ವಹಿಸಿದವರೂ ವಿರಳವಾಗಿದ್ದರು. ಮಾನ್ಯ ನಿಜಲಿಂಗಪ್ಪನವರು, ಹೆಗಡೆಯವರು, ಹನುಮಂತಯ್ಯನವರು, ವೀರೇಂದ್ರ ಪಾಟೀಲರು ಸಮರ್ಥ ಆಡಳಿತಗಾರರಾಗಿ ಥಟ್ಟನೆ ನೆನಪಾಗುತ್ತಾರೆ.