Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ಕಲ್ಪಿಸಿಕೊಳ್ಳಬಲ್ಲಷ್ಟು ಕ್ವಚಿತ್ತಾದ ಸೇನೆ

ಇಪ್ಪತ್ತನೇ ಶತಮಾನದ ಇಬ್ಬರು ದೊಡ್ಡ ಕನಸುಗಾರರೆಂದರೆ ಗಾಂಧಿ ಮತ್ತು ಮಾರ್ಕ್ಸ್‌. ದೇಶವನ್ನು ಬಲಿಷ್ಠಗೊಳಿಸುವ ಕಾರಣಕ್ಕಾಗಿ ನಾವು ಗಾಂಧಿ ಮತ್ತು ಮಾರ್ಕ್ಸ್ ಇಬ್ಬರ ಕನಸುಗಳನ್ನೂ ಕಡೆಗಾಣಿಸಿ ಅವರನ್ನು ಆಳುವವರ ವ್ಯವಹಾರಕ್ಕೆ ಅನುಕೂಲವಾಗುವಷ್ಟು ಮಾತ್ರ ಉಳಿಸಿಕೊಂಡಿದ್ದೇವೆ. ಈಗ ಕನಸುಗಳೇ ಇಲ್ಲದ ಜಗತ್ತಾಗಿ ನಾವು ಬದುಕುತ್ತಿದ್ದೇವೆ. ಆದರೆ ಇನ್ನೂ ಕನಸುಗಳನ್ನು ಕಾಣಬಲ್ಲ ಚಿಂತಕನೊಬ್ಬನನ್ನು ಓದಿ ಈ ಕಾಲದ ವಿದ್ಯಮಾನಗಳಿಂದ ಖಿನ್ನವಾಗುತ್ತಿದ್ದ ನನ್ನ ಮನಸ್ಸು ಉಲ್ಲಸಿತವಾಗಿದೆ.

ಕನ್ನಡ ಚಿತ್ರರಂಗದ ಮೊದಲ ಕ್ರಾಂತಿ ಪುರುಷ*

ಪಟ್ಟಾಭಿ ವಿಲಕ್ಷಣ ಪ್ರತಿಭೆಯ ಕಲಾವಿದ. ಅವರು ಕಲಿತದ್ದು ಟ್ಯಾಗೋರರ ಶಾಂತಿನಿಕೇತನದಲ್ಲಿ. ಟ್ಯಾಗೋರರ ಕಾವ್ಯದಿಂದ ಅವರು ಪ್ರಭಾವಿತರಾಗಿದ್ದರು. ಹಾಗೆಯೇ ತಮ್ಮ ಕಾಲದ ಇತರ ಎಲ್ಲಾ ಲೇಖಕರಿಗಿಂತ ಮೊದಲು ಆ ಪ್ರಭಾವದಿಂದ ಪಾರಾದವರೂ ಪಟ್ಟಾಭಿಯೇ.

ಅವರ `ಪಿಟೀಲ್‌ ಡಝನ್‌’ ಕಾವ್ಯ ಸಂಗ್ರಹದ ಕವನಗಳ ತೀವ್ರವಾದ ನವ್ಯತೆ ಕನ್ನಡದಲ್ಲಿ ಕಾಣಿಸಿಕೊಂಡದ್ದು ಪಟ್ಟಾಭಿ ತೆಲುಗಿನಲ್ಲಿ ಬರೆದಾದ ಎರಡು ಮೂರು ದಶಕಗಳ ನಂತರ. ತೆಲುಗು ಕಾವ್ಯದ ಇತಿಹಾಸವನ್ನೇ ಅವರು ಬದಲು ಮಾಡಿದರು. ಪಟ್ಟಾಭಿಯಂಥ ಕ್ರಾಂತಿಕಾರಿಯಾದ ಮನಸ್ಸಿಗೆ ಅದೆಷ್ಟು ಹಿಂದೆ ತೆಲುಗಿನಂಥಾ ನಾದಮಯ ಭಾವಾತಿಕರೇಕದ ಭಾಷೆ ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ಆಶ್ಚರ್ಯವಾಗುತ್ತದೆ.