ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಆಕಾಶವಾಣಿ ಸಂದರ್ಶನದ ಪಠ್ಯ ರೂಪ
ಇತ್ತೀಚೆಗೆ ಮೈಸೂರು ಆಕಾಶವಾಣಿ ಯು.ಆರ್. ಅನಂತಮೂರ್ತಿಯವರನ್ನು ಸಂದರ್ಶಿಸಿತು. ಕನ್ನಡದ ಪ್ರಮುಖ ಲೇಖಕರಲ್ಲಿ ಒಬ್ಬರಾದ ಅಬ್ದುಲ್ ರಶೀದ್ ಮಾಡಿದ ಈ ಸಂದರ್ಶನದ ಪಠ್ಯ ರೂಪ ಚುರುಮುರಿಯಲ್ಲಿದೆ.
ಇಸ್ಮಾಯಿಲ್
ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ಜ್ಞಾನ ಯಜ್ಞ
ಕೊಲ್ಲಾಪುರದ ರಾಜ ಶೂದ್ರ ಸಮುದಾಯದ ಏಳಿಗೆಗಾಗಿ ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹೋರಾಡಿದವನು. ಇವನ ಬಗ್ಗೆ ಒಂದು ವೃತ್ತಾಂತವಿದೆ. ಅವನು ಶಿವಾಜಿ ವಂಶದವನು. ಶಿವಾಜಿ ಕ್ಷತ್ರಿಯನಾಗಿ ಸಿಂಹಾಸನ ಏರಿದವನು. ಕಾಶಿಯ ಬ್ರಾಹ್ಮಣರು ಅವನಿಗೆ ಕ್ಷತ್ರಿಯ ಪಟ್ಟಕೊಡಲು ಅವನಿಗೊಂದು ವಂಶಾವಳಿ ನಿರ್ಮಿಸಲು ಮುಂದಾದರು. ಮಹಾರಾಷ್ಟ್ರದ ಬ್ರಾಹ್ಮಣರು ಒಲ್ಲೆಯೆಂದಾಗ ಆದದ್ದು ಇದು.