ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
Literature in the Indian Bhashas: its front yard and its back yard
Let me use a traditional Indian home, my own home which I knew as a child, as a metaphor for Indian literature. My father and his friends frequented the front-yard which had a raised earthen platform under the country tiled roof. Caste was no bar here. It was a village, and the non-brahmin friends of my father who came to consult him for auspicious days for weddings, and other ceremonies, and, more frequently, to sort out land related litigations sat around him on colored mats on this raised platform. The very poor belonging to the same castes sat a step below under the platform, on a matless, but cowdung treated and well swept space. Father offered everyone pan and betelnuts and even tobacco to chew. This space in the frontyard, framed impressively by massive well-carved pillars was a place of authority, and cheerful and full of new tidings of the temporal world outside, as well as of the spiritual world beyond. On auspicious occasions, Puranic stories too were recited here by invited traditional story-tellers.
‘ಪೂರ್ವಭಾಷಿ’ ಸಾಲ್ ಬೆಲ್ಲೋನ ಸಾಂಗತ್ಯ
ಚಿಕಾಗೊ ನಗರದ ರಾಮಾನುಜನ್ ಮನೆಯಲ್ಲಿ ಕಾದಂಬರಿಕಾರ ಸಾಲ್ ಬೆಲ್ಲೊನನ್ನು ಭೇಟಿಯಾಗಿದ್ದೆ. ಎಪ್ಪತ್ತರ ದಶಕದ ಮಧ್ಯದಲ್ಲಿ ಎಂದು ನೆನಪು. ಮಗನನ್ನು ಈಜಲು ಕೊಳದಲ್ಲಿ ಬಿಟ್ಟು ಬೆಲ್ಲೋ ಬಂದಿದ್ದ. ಸಾಲ್ ಬೆಲ್ಲೊನನ್ನು ಟೀಸ್ ಮಾಡಲೆಂದು ರಾಮಾನುಜನ್ನರ ಹೆಂಡತಿ ಮಾಲಿ `ನಿನ್ನ ಯಾವ ಹೆಂಡತಿಯ ಮಗನ ಸರದಿ ಇವತ್ತು? ಎಂದಳು. ಹಲವು ಬಾರಿ ಮದುವೆಯಾದ ಖ್ಯಾತಿ ಬೆಲ್ಲೋನದು. ಬೆಲ್ಲೊ ನಕ್ಕು ಜಂಬದಿಂದ ಹುಬ್ಬನ್ನು ಏರಿಸಿ, `ಯಾವ ಹೆಂಡತಿ ಎಂದು ಹೇಗೆ ವಿವರಿಸಲಿ? ಸೀಸರನ ಹೆಂಡತಿ ಎಂದರೆ ಸಾಕಲ್ಲವೆ? ಎಂದ.