Select Page

ರುಜುವಾತು

ಯು. ಆರ್. ಅನಂತಮೂರ್ತಿ

ರುಜುವಾತು ಸಂಚಿಕೆಗಳು

ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ. 

ನಮ್ಮ ಹಾಸನದ ರಾಜಾರಾಯರು

ಅನಂತಮೂರ್ತಿ ಕುಟುಂಬದ ಜತೆ ರಾಜಾರಾಯರು ಮತ್ತು ಪತ್ನಿ ಸೂಸನ್

ಚೆಗೆ ಬೆಂಗಳೂರಿಗೆ ಅಮೆರಿಕದಲ್ಲಿರುವ ಬಂಗಾಳದ ಖ್ಯಾತ ಲೇಖಕಿ ಗಾಯತ್ರಿ ಸ್ಪೀವಾಕ್‌ ಬಂದಿದ್ದರು. ಅವರು ತಮ್ಮ ಕ್ರಾಂತಿಕಾರಕವಾದ `ಸಬಾಲ್ಟರನ್‌' ರಾಜಕೀಯ ಸಾಂಸ್ಕೃತಿಕ ಕ್ರಿಯೆಗಳಿಗೂ, ಜೊತೆಗೆ ಬಂಗಾಳಿಯಿಂದಲೂ ಫ್ರೆಂಚ್‌ನಿಂದಲೂ ತಾವು ಮಾಡುವ ಭಾಷಾಂತರಗಳಿಗೂ ಸಮಾನವಾದ ಭೂಮಿಕೆಯೊಂದನ್ನು ಸೃಷ್ಟಿಸಿಕೊಳ್ಳಲು `ಅನುವಾದ' ಎನ್ನುವ ಪದವನ್ನು ಬಳಸಿದರು. ಈ `ಅನುವಾದ'ಕ್ಕೆ ಅವರ ತಾತ್ವಿಕತೆ ಹಚ್ಚಿದ ಅರ್ಥಗಳು ಅನೇಕ. ಅನುಸರಿಸಿದ್ದು ಎನ್ನುವುದು ಒಂದು ಅರ್ಥ. ಅನಂತರದ್ದು-ಕಾಲದಲ್ಲಿ ಅಲ್ಲ; ತದ್ಗತವಾಗುವ ಸಾನ್ನಿಧ್ಯದಲ್ಲಿ- ಎನ್ನುವುದು ಇನ್ನೊಂದು ಅರ್ಥ.

ನಾನು, ಓ ವಿ ವಿಜಯನ್, ಅಯ್ಯಪ್ಪ ಮತ್ತು ರಾಮ

ಕೇರಳದ ಓ.ವಿ.ವಿಜಯನ್‌ ಈ ನಮ್ಮ ಯುಗದ ಅತ್ಯಂತ ಮಹತ್ವದ ಲೇಖಕರಲ್ಲಿ ಒಬ್ಬರು. ಈಗ ಅವರು ಬದುಕಿಲ್ಲ. ಆದರೆ ಹಲವು ಮಲೆಯಾಳಿ ಓದುಗರಿಗೆ ಇವತ್ತಿಗೂ ಅಚ್ಚುಮೆಚ್ಚಿನ ಲೇಖಕ ವಿಜಯನ್‌. ಅವರ `ಕಸಾಕಿನ ಇತಿಹಾಸ' ಎನ್ನುವ ಕಾದಂಬರಿಯನ್ನು ಪುಸ್ತಕದ ಸಹಾಯವಿಲ್ಲದೆ ಇಡೀ ಪೇಜುಗಳನ್ನು ನೆನಪಿನಿಂದ ವಾಚಿಸುವವರನ್ನು ನಾನು ನೋಡಿದ್ದೇನೆ. ಅದು ಕಾದಂಬರಿಯಾಗಿದ್ದೂ ಒಂದು ದೀರ್ಘ ಕವನದಂತಿದೆ. ಈ ಕಾಲದ ಎಲ್ಲ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಹುಡುಕಾಟದಲ್ಲಿ ತನ್ನ ಇಡೀ ಜೀವನವನ್ನು ವಿಜಯನ್‌ ಕಳೆದರು. ಕಮ್ಯುನಿಸ್ಟ್‌ ಆಗಿ ಕಾರ್ಟೂನುಗಳನ್ನು ಬರೆಯುತ್ತಿದ್ದ ವಿಜಯನ್‌ ಆಗಿನ ಪ್ರಸಿದ್ಧ ಶಂಕರ್ಸ್‌ ವೀಕ್ಲಿಯಲ್ಲಿ ಕೆಲಸ ಮಾಡುತ್ತಿದ್ದರು. ಆಮೇಲೆ ಸ್ಟಾಲಿನ್‌ ವಿರೋಧಿಯಾದರು. ವಿಜಯನ್‌ ಎಮರ್ಜೆನ್ಸಿ ಕಾಲದಲ್ಲಿ ಕಾರ್ಟೂನುಗಳನ್ನು ಬರೆಯುವುದನ್ನು ಬಿಟ್ಟರು. ಪ್ರಜಾತಂತ್ರದಲ್ಲಿ ಮಾತ್ರ ವ್ಯಂಗ್ಯ ಚಿತ್ರ ಕಲೆ ಸಾಧ್ಯವೆಂದು ಅವರ ನಂಬಿಕೆಯಾಗಿತ್ತು. ಕಟುವಾದ ವಿಡಂಬನೆಯಲ್ಲಿ ಎಲ್ಲ ಬಗೆಯ ಆತ್ಮವಂಚನೆಗಳನ್ನೂ ಪರ ವಂಚನೆಗಳನ್ನೂ ಬಯಲಿಗೆಳೆಯುತ್ತಿದ್ದ ವಿಜಯನ್‌ ಜನಪ್ರಿಯನಾಗಿ ಬರೆಯಲು ಪ್ರಯತ್ನ ಪಟ್ಟವರೇ ಅಲ್ಲ.