ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಸುಬ್ಬಣ್ಣ, ನೀನಾಸಂ ಮತ್ತು ಕನ್ನಡದಲ್ಲಿ ಷೇಕ್ಸ್ ಪಿಯರ್
ನೀನಾಸಂ ಸೃಷ್ಟಿಸಿದ ನನ್ನ ಗೆಳೆಯ ಕೆ ವಿ ಸುಬ್ಬಣ್ಣ ತೀರಿಕೊಂಡಿದ್ದು ಹೋದ ವರ್ಷ ಜುಲೈ ಹದಿನಾರನೇ ತಾರೀಕು. ಈ ಹದಿನಾರಕ್ಕೆ ಹೆಗ್ಗೋಡಿನಲ್ಲಿ ಅವರನ್ನು ನೆನೆಯುವ ಒಂದು ಸಮಾರಂಭ ನಡೆಯಿತು. ಸುಬ್ಬಣ್ಣನವರ ಮಗ ಅಕ್ಷರ ಆ ದಿನ ತಾವೇ ಭಾಷಾಂತರಿಸಿದ ಷೇಕ್ಸ್‌ಪಿಯರ್‌ನ `ಮೆಷರ್ ಫಾರ್ ಮೆಷರ್'ನ್ನು ಆಡಿಸಿದರು. `ಕ್ರಮ ವಿಕ್ರಮ' ಅಕ್ಷರ ಕೊಟ್ಟ ಶೀರ್ಷಿಕೆ. ವಿಶೇಷವೆಂದರೆ ಈ ನಾಟಕದಲ್ಲಿ ಭಾಗವಹಿಸಿದವರು ಊರಿನವರು; ತಮ್ಮ ತಮ್ಮ ವೃತ್ತಿಗಳಲ್ಲಿ ನಿರತರು. ನೀನಾಸಂನ ರಂಗ ಶಾಲೆಯಲ್ಲಿ ಕಲಿತವರಲ್ಲ-ಹಲವು ವರ್ಷಗಳ ಹಿಂದೆ ನೀನಾಸಂ ಹುಟ್ಟಿಕೊಂಡಿದ್ದೂ ಹೆಗ್ಗೋಡಿನ ಸುತ್ತಮುತ್ತಲ ಹಳ್ಳಿಯವರೇ ಆಗೀಗ ನಾಟಕಗಳು ಆಡಲೆಂದು-ಈ ಹಳ್ಳಿಯ ಜನ ಷೇಕ್ಸ್ ಪಿಯರನ ನಾಟಕವನ್ನು ಆಡುವುದೇ ವಿಶೇಷ. ಹೊರಗಿನ ವಿಶಾಲ ಪ್ರಪಂಚ ಹೆಗ್ಗೋಡಿನಲ್ಲಿ ತಾವು ಇರುವ ತಾಣದಲ್ಲೇ ಒದಗ ಬೇಕೆಂಬ ಸುಬ್ಬಣ್ಣನ ಆಶಯ ಹೀಗೆ ಮತ್ತೆ ಸಾರ್ಥಕವಾಯಿತು.
ರಾಜಕೀಯದ ಪತನ
ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಈಗಿನ ರಾಜಕಾರಣ ಹೊಲಸಾಗಿದೆ ಎಂದು ಹೇಳಲು ಹೊರಟಿದ್ದೇ ನನಗೆ ಈ ಗಾದೆ -ನಾನು ಈಗ ಮಾತನ್ನಾಡುತ್ತಿರುವುದರ ಬಗ್ಗೆ ಕೂಡ- ಸತ್ಯವೆನ್ನಿಸಿತು. ಸದ್ಯ ಆಗುತ್ತಿರುವುದಕ್ಕೆ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪಾಲುದಾರರು ಎಂದು ತಿಳಿದು ಮಾತನ್ನಾಡಲು ಪ್ರಯತ್ನಿಸುವುದು ಸಾಧ್ಯವೆ ನೋಡುವೆ.