ರುಜುವಾತು
ಯು. ಆರ್. ಅನಂತಮೂರ್ತಿ
ರುಜುವಾತು ಸಂಚಿಕೆಗಳು
ಯು. ಆರ್. ಅನಂತಮೂರ್ತಿಯವರ ಸಾರಥ್ಯದ ‘ರುಜುವಾತು’ ಈಗ CC-by-SA-NC ಅಡಿ ಇಂಟರ್ನೆಟ್ ಆರ್ಕೈವ್‌ನಲ್ಲಿ.
ಭಾರತ-ಪಾಕಿಸ್ತಾನ: ಚರಿತ್ರೆಯನ್ನು ಮೀರುವ ಒಂದು ಕನಸು
ನಾನು ಬರ್ಮಿಂಗಂನಲ್ಲಿ ಇದ್ದಾಗಲೇ ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭವಾಯಿತು. ಸಾರಿ ಮಾಡಿದ ಯುದ್ಧ ಇದಲ್ಲ. ಕಾಲು ಕೆದರಿ ಪಾಕಿಸ್ತಾನವೇ ಇದ್ದಕ್ಕಿದ್ದಂತೆ ಶುರುಮಾಡಿದ್ದು. 1965ನೇ ಇಸವಿಯ ಆಗಸ್ಟ್ ತಿಂಗಳಲ್ಲಿ ಎಂದು ನೆನಪು. ಇದರ ಕೊನೆಯಾದದ್ದು ಭಾರತದ ಇತಿಹಾಸದಲ್ಲಿ ಪರಮ ಸಜ್ಜನನಾದ ಲಾಲ್ ಬಹದ್ದೂರ್ ಶಾಸ್ತ್ರಿಗಳ ಸಾವಿನಲ್ಲಿ; ತಾಷ್ಕೆಂಟ್ ಒಪ್ಪಂದದ ನಂತರ.
ದೇಶ ವಿಭಜನೆ: ಇನ್ನೊಂದು ಕಾರಣದ ಕಥನ
ಸುಮಾರು ನಲವತ್ತಮೂರು ವರ್ಷಗಳ ಹಿಂದಿನ ನೆನಪು ಇದು. ಬರ್ಮಿಂಗಂನಲ್ಲಿ ನಾನು ವಿದ್ಯಾರ್ಥಿ. ನನಗೆ ಒಬ್ಬ ಪಾಕಿಸ್ತಾನೀ ಸ್ನೇಹಿತ. ಅವನ ಹೆಸರು ಕೂಡ ಭುಟ್ಟೋ. ಯೂನಿವರ್ಸಿಟಿ ಕ್ಯಾಂಟೀನಿನ ಹುಲ್ಲು ಹಾಸಿನ ಮೇಲೆ ಅಪರೂಪದವರೆಂಬಂತೆ ಬೆಳಗುವ ಬಿಸಿಲಿನಲ್ಲಿ ನಾವು ಡ್ರಾಫ್ಟ್ ಬಿಯರ್ ಕುಡಿಯುತ್ತ ಕೂರುತ್ತಿದ್ದೆವು.